ವಿಶ್ವದ ಅಗ್ರ ಪ್ರವಾಸಿ ತಾಣಗಳಲ್ಲಿ ಗೋವಾಕ್ಕೂ ಸ್ಥಾನ

ಸಿಂಗಾಪುರ, ಮಂಗಳವಾರ, 3 ನವೆಂಬರ್ 2009( 18:30 IST )
ರಜಾದಿನಗಳಲ್ಲಿ ತಿರುಗಾಟಕ್ಕೆ ಯೋಗ್ಯವೆನಿಸುವ ತಾಣಗಳನ್ನು ಸಂಸ್ಥೆಯೊಂದು ಪ್ರಕಟಿಸಿದ್ದು, 2010ರಲ್ಲಿ ಪ್ರವಾಸ ಮಾಡಬಹುದಾದ ಅಗ್ರಮಾನ್ಯ ಪ್ರಾಂತಗಳ ಪಟ್ಟಿಯಲ್ಲಿ ಗೋವಾ ಕೂಡ ಸ್ಥಾನ ಪಡೆದುಕೊಂಡಿದೆ.
ಆದರೆ ದೇಶಗಳ ಅಥವಾ ನಗರಗಳ ಪಟ್ಟಿಯಲ್ಲಿ ಭಾರತ ಅಥವಾ ದೇಶದ ಇತರ ನಗರಗಳು ಅಗ್ರ ಸ್ಥಾನ ಪಡೆದುಕೊಳ್ಳಲು ವಿಫಲವಾಗಿವೆ. ಪ್ರಾಂತಗಳ ಪಟ್ಟಿಯಲ್ಲಿ ಗೋವಾ ರಾಜ್ಯವು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
'2010ರ ಸುಂದರ ಪ್ರವಾಸಿ ತಾಣಗಳು' ಎಂದು ಹೆಸರಿಸಲಾಗಿರುವ ಈ ಹೊತ್ತಿಗೆಯನ್ನು ಸುರಿನೇಮ್ ಎಂಬ ಪ್ರವಾಸಿ ಸಂಸ್ಥೆಯು ಸೋಮವಾರ ಬಿಡುಗಡೆ ಮಾಡಿದೆ.
ಮುಂದಿನ ವರ್ಷ ಯಾವ ಯಾವ ಪ್ರದೇಶಗಳಿಗೆ ಪ್ರವಾಸ ಮಾಡಬಹುದು ಮತ್ತು ಆ ಸ್ಥಳಗಳಲ್ಲೇನು ವಿಶೇಷಗಳಿವೆ ಎಂಬುದನ್ನು ವಿವರಿಸುವ ಕಾರ್ಯವನ್ನು ಈ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಪ್ರತೀ ವರ್ಷವೂ ಮಾಡುತ್ತಾ ಬರುತ್ತಿದೆ.
ನಾವು ಪಟ್ಟಿ ಮಾಡಿರುವ ಪ್ರವಾಸಿ ತಾಣಗಳು ಮತ್ತು ಅಲ್ಲಿನ ಅನುಭವಗಳು ಮುಂದಿನ ವರ್ಷ ಪ್ರವಾಸ ಮಾಡುವ ಜನರು ಖಂಡಿತಾ ಪರಿಗಣಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ರ 10 ದೇಶಗಳು: ಎಲ್ ಸಾಲ್ವಡಾರ್, ಜರ್ಮನಿ, ಗ್ರೀಸ್, ಮಲೇಷಿಯಾ, ಮೊರೊಕೋ, ನೇಪಾಳ, ನ್ಯೂಜಿಲೆಂಡ್, ಪೋರ್ಚುಗಲ್, ಸುರಿನೇಮ್ ಮತ್ತು ಅಮೇರಿಕಾ.
ಅಗ್ರ 10 ಪ್ರಾಂತಗಳು: ಅಲ್ಸೇಸ್-ಫ್ರಾನ್ಸ್, ಬಾಲಿ-ಇಂಡೋನೇಷಿಯಾ, ಫೆರ್ನಾಂಡೋ ಡೇ ನೊರೊನ್ಹಾ-ಬ್ರೆಜಿಲ್, ಗೋವಾ-ಭಾರತ, ಕೋಹ್ ಕಾಂಗ್ ಕನ್ವರ್ಸೇಷನ್ ಕಾರಿಡಾರ್-ಕಾಂಬೋಡಿಯಾ, ಲೇಕ್ ಬೈಕಾಲ್-ರಷ್ಯಾ, ಒಕ್ಸಾಕ-ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ದಿ ಲೇಕ್ ಡಿಸ್ಟ್ರಿಕ್ಟ್-ಇಂಗ್ಲೆಂಡ್, ಸೌತ್ವೆಸ್ಟ್ ವೆಸ್ಟರ್ನ್ ಆಸ್ಟ್ರೇಲಿಯಾ.
ಅಗ್ರ 10 ನಗರಗಳು: ಅಬುಧಾಬಿ, ಯುನೈಟೆಡ್ ಅರಬ್ ಎಮಿರೇಟ್ಸ್, ಚಾರ್ಲೆಸ್ಟನ್, ಅಮೆರಿಕಾ, ಕಾರ್ಕ್, ಐರ್ಲೆಂಡ್, ಕ್ಯೂಯೆನ್ಸಾ, ಈಕ್ವೆಡಾರ್, ಇಸ್ತಾನ್‌ಬುಲ್, ಟರ್ಕಿ, ಕ್ಯೂಟೋ, ಜಪಾನ್, ಲೇಸ್, ಇಟಲಿ, ಸರಜೇವೋ, ಬೋಸ್ನಿಯಾ, ಸಿಂಗಾಪುರ, ವಾಂಕೊವರ್, ಕೆನಡಾ.