ಸಾನ್ ಫ್ರಾನ್ಸಿಸ್ಕೋ, ಶನಿವಾರ, 7 ನವೆಂಬರ್ 2009( 13:43 IST )
ಆಪಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಸ್ಟೀವ್ ಜಾಬ್ಸ್ ಅವರನ್ನು ದಶಕದ ಸಿಇಓ ಎಂಬುದಾಗಿ ಪರಿಗಣಿಸಲಾಗಿದೆ. ಕಂಪ್ಯೂಟರ್, ಸಂಗೀತ, ಚಲನಚಿತ್ರ ಹಾಗೂ ಮೊಬೈಲ್- ಈ ಮುಂತಾದ ನಾಲ್ಕು ರಂಗಗಳಲ್ಲಿ ಅದ್ಭುತ ಯಶಸ್ಸುಗಳಿಸಿದ ಕಾರಣಕ್ಕೆ ಅವರನ್ನು ದಶಕದ ಸಿಇಓ ಎಂದು ಹೇಳಲಾಗಿದೆ.
ಕಳೆದ ದಶಕದಲ್ಲಿ ಜಾಬ್ಸ್ ಮತ್ತು ಆಪಲ್ ಸಂಗೀತ, ಸಿನಿಮಾ ಹಾಗೂ ಸೆಲ್ ಫೋನ್‌ರಂಗದಲ್ಲಿ ಬದಲಾವಣೆ ತಂದಿದ್ದು ಅವರ ಈ ಪ್ರತಿಭೆಯಿಂದಾಗಿ ಅವರನ್ನು ದಶಕದ ಸಿಇಓ ಎನ್ನಲಾಗಿದೆ.
ತಾನು ಸ್ಥಾಪಿಸಿದ ಕಂಪೆನಿಯಿಂದ ಹೊರಹಾಕಿದ ಬಳಿಕ ಜಾಬ್ಸ್ ಅವರು 1997ರಲ್ಲಿ ಆಪಲ್ ಸಂಸ್ಥೆಗೆ ಮರಳಿದ್ದರು. ಕಂಪೆನಿಯನ್ನು ಸುಸ್ಥಿತಿಗೆ ತರಲು ಅವರಿಗೆ ಹಲವಾರು ವರ್ಷಗಳೇ ಬೇಕಾದವು. ದಿವಾಳಿ ಎದ್ದಿದ್ದ ಕಂಪೆನಿಯನ್ನು ಸುಸ್ಥಿತಿಗೆ ತಂದಿರುವ ಛಾತಿ ಅವರದ್ದು.
ಇದೀಗ ಸಂಸ್ಥೆಯಲ್ಲಿ 34,000 ಉದ್ಯೋಗಿಗಳಿದ್ದು, 170 ಬಿಲಿಯನ್ ಡಾಲರ್ ಬೆಲೆ ಬಾಳುತ್ತದೆ.