ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ಬೆಲೆ ಗರಿಷ್ಠ ಏರಿಕೆ; 17,000ದತ್ತ ದಾಪುಗಾಲು (Gold prices | Rs 17K | bullion market)
Feedback Print Bookmark and Share
 
ND
ಜಾಗತಿಕ ಮಾರುಕಟ್ಟೆಗಳು ಸ್ಥಿರಗೊಳ್ಳುತ್ತಿರುವ ಮತ್ತು ಮದುವೆ ಸೀಸನ್ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಆಕಾಶಮುಖಿಯಾಗಿದ್ದು 10 ಗ್ರಾಂ ಚಿನ್ನದ ಬೆಲೆಯು 17 ಸಾವಿರ ರೂಪಾಯಿ ಅಂಚಿಗೆ ಬಂದು ನಿಂತಿದೆ. ಚಿನಿವಾರ ಪೇಟೆಯಲ್ಲಿ ಶನಿವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 16,900 ರೂಪಾಯಿ ದಾಖಲಾಗಿದೆ.

ಶನಿವಾರ 10 ಗ್ರಾಂ ಚಿನ್ನದ ಬೆಲೆ 75 ರೂಪಾಯಿ ಏರಿಕೆ ಕಂಡು 16,900 ರೂಪಾಯಿಗೆ ಚಿಮ್ಮಿದ್ದು, ಇದು ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಅಮೆರಿಕದ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಹೊಸ ಎತ್ತರಕ್ಕೆ ಏರಿದೆ. ಔನ್ಸ್ ಒಂದರ 1,099 ಡಾಲರ್ ರೂಪಾಯಿ ಇಲ್ಲಿ ದಾಖಲಾಗಿದೆ.

ಮುಂಬರುವ ಮುದುವೆ ಸೀಸನ್‌‌ನಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಚಿನ್ನದ ಖರೀದಿ ಭರಾಟೆ ಜೋರಾಗಿತ್ತು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದೃಢತೆಯೂ ಚಿನ್ನದ ಖರೀದಿಯನ್ನು ಏರಿಸಿದ್ದು, ಇದು ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ ಕಾಣಲು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ