ಅಮೆರಿಕದ ಅಟೊಮೋಬೈಲ್ ದಿಗ್ಗಜ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್(ಜಿಎಂ), ಚೀನಾ ನಿರ್ಮಿತ ಕಾರನ್ನು ಭಾರತಕ್ಕೆ ತರುವ ಪ್ರಸ್ತಾಪವನ್ನು ಹೊಂದಿದೆ ಎಂಬುದಾಗಿ ಶನಿವಾರದ ವರದಿಯೊಂದು ಹೇಳಿದೆ.
ಜಿಎಂ ತನ್ನ ಚೀನಾ ಪಾಲುದಾರರೊಂದಿಗೆ ಈ ಯೋಜನೆಗೆ ಮುಂದಾಗಿದೆ. ಈ ಕುರಿತು ಪಾಲುದಾರ ಸಂಸ್ಥೆಯಾದ ಶಾಂಘೈ ಅಟೋಮೇಟಿವ್ ಇಂಡಸ್ಟ್ರಿ ಕಾರ್ಪೋರೇಶನ್(ಎಸ್ಎಐಸಿ) ಜತೆ ಜಿಎಂ ಕಳೆದ ಎಂಟು ತಿಂಗಳಿಂದ ಮಾತುಕತೆ ಆರಂಭಿಸಿದೆ.