ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಲ್ಲಾ ರೈಲ್ವೇ ನೇಮಕಾತಿ ಮಂಡಳಿ ಮುಖ್ಯಸ್ಥರ ವಜಾ (Mamata | sacks | railway | recruitment)
Feedback Print Bookmark and Share
 
ಮಾಜಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಆಡಳಿತಕ್ಕೆ ಮತ್ತೊಂದು ಗುದ್ದು ನೀಡಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ಎಲ್ಲಾ ರೈಲ್ವೇ ನೇಮಕಾತಿ ಮಂಡಳಿ(ಆರ್ಆರ್‌ಬಿ)ಯ ಅಧ್ಯಕ್ಷರನ್ನು ತೆಗೆದು ಹಾಕಿದ್ದು ಹೊಸ ಅಧ್ಯಕ್ಷರನ್ನು ನೇಮಿಸಿದ್ದಾರೆ.

ದೊಡ್ಡ ಮಟ್ಟದ ಭ್ರಷ್ಟಾಚಾರ, ಅನಿಯಮಿತತೆ ಹಾಗೂ ಪ್ರಶ್ನೆಪತ್ರಿಕೆ ಬಹಿರಂಗ ಮುಂತಾದ ದೂರುಗಳ ಹಿನ್ನೆಲೆಯಲ್ಲಿ ನೇಮಕಾತಿ ಮಂಡಳಿಯಲ್ಲಿ ಸಮಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ಮಮತಾ ಅವರು ಈ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅಲಬಾದ್ ಮತ್ತು ಅಜ್ಮೀರ್ ನೇಮಕಾತಿ ಮಂಡಳಿಯಲ್ಲಿ ಇತ್ತೀಚೆಗೆ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿತ್ತು.

ರೈಲ್ವೇ ಸಚಿವೆ ಎಲ್ಲಾ ಆರ್ಆರ್‌ಬಿಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದ್ದಾರೆ ಎಂಬುದಾಗಿ ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿರಿಯ ರೈಲ್ವೇ ಅಧಿಕಾರಿಗಳನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದ್ದು ಇವರ ಅಧಿಕಾರಾವಧಿ ಮೂರು ವರ್ಷಗಳು ಎಂದವರು ತಿಳಿಸಿದ್ದಾರೆ.

ಹೆಚ್ಚಿನ ಅಧ್ಯಕ್ಷರನ್ನು ಲಾಲೂ ಅವರ ಅಧಿಕಾರಾವಧಿಯಲ್ಲಿ ನೇಮಿಸಲಾಗಿದ್ದು, ಇವರಲ್ಲಿ ಹೆಚ್ಚಿನವರ ಅಧಿಕಾರಾವಧಿ ಇನ್ನಷ್ಟೆ ಮುಗಿಯಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ