ಕೈಗಾರಿಕೆಗಳಲ್ಲಿ ಬಳಸುವ ಅನಿಲಗಳು ಹಾಗೂ ವಾಹನಗಳು ಸೇರಿದಂತೆ ದೇಶದ ಉತ್ಪಾದನಾ ಕ್ಷೇತ್ರ ಪ್ರಸ್ತುತ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಶೇ.20ರಷ್ಟು ಅಭಿವೃದ್ಧಿ ಕಂಡಿದೆ. ಜಾಗತಿಕ ಆರ್ಥಿಕ ಕುಸಿತದಿಂದ ಉತ್ಪಾದನಾ ಕ್ಷೇತ್ರ ಹೊರಬರುವ ಲಕ್ಷಣಗಳು ಇದರಿಂದ ಗೋಚರಿಸುತ್ತಿವೆ ಎಂದು ಸಿಐಐ ಸಮೀಕ್ಷೆ ತಿಳಿಸಿದೆ.