ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್, ಕ್ಯಾಪರ್‌ಕಾಮ್ ಹಾಗೂ ಹಾಲಿವುಡ್ ತಾರೆ ಬ್ರಾಡ್ ಪಿಟ್ ಅವರ ಬ್ಲಾನ್ ಬಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜೊತೆಗೂಡಿ ಸಿನಿಮಾ ನಿರ್ಮಿಸಲು ಹೊರಟಿದ್ದಾರೆ. ವಿಡಿಯೋ ಗೇಮ್ ಡಾರ್ಕ್ ವಾಯ್ಡ್ ಆಧರಿಸಿದ ಈ ಕಥಾನಕದಲ್ಲಿ ಬ್ರಾಡ್ ಪಿಟ್ ಅವರೇ ನಟಿಸುವ ಸಂಭವವಿದೆ. ಇದು ಆಕ್ಷನ್ ಮೇಲೆ ಒತ್ತು ಕೊಟ್ಟಿರುವ ಚಿತ್ರವಾಗಿದೆ.