ಚಿನ್ನ ದಿನೇ ದಿನೇ ಶರವೇಗದಲ್ಲಿ ಏರಿಕೆಯತ್ತ ಸಾಗುತ್ತಿದೆ. 10 ಗ್ರಾಂಗಳಿಗೆ 17,605 ರೂಪಾಯಿ ದಾಖಲಾಗುವ ಮೂಲಕ ದಿನವೂ ಹೊಸ ಹೊಸ ದಾಖಲೆ ಬರೆಯುತ್ತಲೇ ಸಾಗುತ್ತಿದೆ.
ಈ ಬಾರಿ 138 ರೂಪಾಯಿಗಳಷ್ಟು ಏರಿಕೆ ಕಾಣುವ ಮೂಲಕ ಶೇ.0.79ರಷ್ಟು ಏರಿದೆ. ಏಷ್ಯಾದಲ್ಲಿ ಪ್ರತಿ ಔನ್ಸಿಗೆ 162.22 ಡಾಲರ್‌ಗೆ ತಲುಪಿದೆ.
ಅಮೆರಿಕನ್ ಡಾಲರ್ ಮೌಲ್ಯ ಕುಸಿದ ಕಾರಣದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಇತ್ತೀಚೆಗೆ ಸೆಂಟ್ರಲ್ ಬ್ಯಾಂಕ್ ಚಿನ್ನವನ್ನು ಖರೀದಿ ಮಾಡಿದ ಪರಿಣಾಮವೂ ಇದೇ ಎಂದು ಹೇಳಲಾಗತ್ತಿದೆ.
ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಸ್ಥಳೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹಕ್ಕೂ ನೀರೆರೆದಂತಾಗಿದೆ. ಏಷ್ಯನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಹೂಡಿಕೆದಾರರನ್ನೂ ಹುಟ್ಟಿಸಿರುವ ಇದು ಚಿನ್ನದ ಏರುಗತಿಗೆ ಕಾರಣವಾಗಿದೆ.