ಕೇಂದ್ರ ಸರಕಾರ ಆರ್ಥಿಕತೆಗೆ ತೊಂದರೆಯಾಗದಂತೆ ನಿಧಾನವಾಗಿ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಉತ್ತೇಜನ ಪ್ಯಾಕೇಜ್‌ಗಳಿಗೆ ತೊಂದರೆಯಾಗದಂತೆ ಬಜೆಟ್ ಮಂಡಿಸಲಾಗುವುದು. ಅದೇ ಸಮಯದಲ್ಲಿ ಆರ್ಥಿಕ ಕುಸಿತವನ್ನು ತಡೆಯಲು ಕೆಲವೊಂದನ್ನು ನೀತಿಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಶೇ.6.2ರಷ್ಟಿದ್ದ ಜಿಡಿಪಿ ದರ, ಉತ್ತೇಜನ ಪ್ಯಾಕೇಜ್‌ಗಳ ಚೇತರಿಕೆಯಿಂದಾಗಿ ಪ್ರಸ್ತುತ ಆರ್ಥಿಕ ಸಾಲಿನಲ್ಲಿ ಆರ್ಥಿಕ ವೃದ್ಧಿ ದರ ಶೇ.6.8ಕ್ಕೆ ಏರಿಕೆಯಾಗಿದೆ.
ಉತ್ತೇಜನ ಪ್ಯಾಕೇಜ್‌ಗಳನ್ನು ನಿಧಾನವಾಗಿ, ವ್ಯವಸ್ಥಿತವಾಗಿ ಆರ್ಥಿಕ ಸುಸ್ಥಿತಿ ಮರಳುವಿಕೆಗೆ ತೊಂದರೆಯಾಗದಂತೆ, ಹಿಂದಕ್ಕೆ ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ಮಾಜಿ ಆರ್‌ಬಿಐ ಗವರ್ನರ್ ರಂಗರಾಜನ್ ತಿಳಿಸಿದ್ದಾರೆ.