ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಹಣದುಬ್ಬರ ದರ ಇಳಿಕೆಯ ನಿರೀಕ್ಷೆ: ರಂಗರಾಜನ್ (Food price inflation | Inflation | Wheat crop)
ಆಹಾರ ಹಣದುಬ್ಬರ ದರ ಇಳಿಕೆಯಾಗುತ್ತಿರುವುದರಿಂದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಣದುಬ್ಬರ ದರ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.

ಮಾರ್ಚ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಇಳಿಕೆಯಾಗುವ ಸೂಚನೆಗಳು ಕಂಡುಬರುತ್ತಿವೆ. ಆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಣದುಬ್ಬರ ಇಳಿಕೆಯಾಗಬಹುದು. ಪ್ರಸ್ತುತ ಆಹಾರ ಹಣದುಬ್ಬರ ದರದಲ್ಲಿ ಇಳಿಕೆಯಾಗುತ್ತಿದೆ ಎಂದು ರಂಗರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಮಾರ್ಚ್ 26ಕ್ಕೆ ವಾರಂತ್ಯಗೊಂಡಂತೆ, ಆಹಾರ ಹಣದುಬ್ಬರ ದರ ನಾಲ್ಕು ತಿಂಗಳ ಕನಿಷ್ಠ ಇಳಿಕೆ ಕಂಡು ಶೇ.9.18ಕ್ಕೆ ತಲುಪಿದೆ. ಸಗಟು ಸೂಚ್ಯಂಕ ದರ ಶೇ.8.31ಕ್ಕೆ ಏರಿಕೆಯಾಗಿದೆ ಎಂದು ವಿವರಣೆ ನೀಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಗೋಧಿ ಬೆಳೆ ಉತ್ತಮವಾಗಿದ್ದು, ಗೋಧಿ ಬೆಳೆ ಮಾರುಕಟ್ಟೆಗೆ ಆಗಮಿಸಿದಲ್ಲಿ ದ್ವಿದಳ ಧಾನ್ಯಗಳ ದರಗಳಲ್ಲಿ ಇಳಿಕೆಯಾಗಲಿರುವುದರಿಂದ ಆಹಾರ ಹಣದುಬ್ಬರ ದರ ಮತ್ತಷ್ಟು ಇಳಿಕೆಯಾಗುವ ಆಶಾಭಾವನೆಗಳಿವೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಇವನ್ನೂ ಓದಿ