ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇಕಡಾ 7.61ಕ್ಕೆ ಕುಸಿತ ಕಂಡ ಆಹಾರ ಹಣದುಬ್ಬರ (Food inflation | Wholesale Price Index | Fruits | Vegetables)
ತರಕಾರಿ, ಧಾನ್ಯ, ಆಲೂಗೆಡ್ಡೆಯ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ, ಜೂನ್ 25ಕ್ಕೆ ಅಂತ್ಯಗೊಂಡ ವಾರದಲ್ಲಿ ಆಹಾರ ಹಣದುಬ್ಬರವು ಶೇಕಡಾ 7.61 ಕ್ಕೆ ತಲುಪುವುದರೊಂದಿಗೆ, ಕಳೆದ ಏಳು ವಾರಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಸಗಟು ದರ ಸೂಚ್ಯಂಕದ ಆಧಾರದಲ್ಲಿ ಅಳೆಯಲಾಗುವ ಆಹಾರ ಹಣದುಬ್ಬರವು ಕಳೆದ ವಾರದಲ್ಲಿ ಶೇ.7.78 ಕ್ಕೆ ಕುಸಿದಿತ್ತು.

ಒಂದು ವರ್ಷದಲ್ಲಿ ಹೋಲಿಸಿದರೆ ಆಹಾರ ಧಾನ್ಯಗಳ ಬೆಲೆಯು ಶೇಕಡಾ 9 ರಷ್ಟು ಕುಸಿತ ಕಂಡಿದೆ ಎಂಬುದನ್ನು ಬುಧವಾರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತವೆ.

ವಾರ್ಷಿಕ ಆಧಾರದಲ್ಲಿ, ತರಕಾರಿ ಬೆಲೆ ಶೇಕಡಾ 8.74 ರಷ್ಟು ಕುಸಿತ ಕಂಡಿದ್ದರೆ, ಆಲೂಗಡ್ಡೆ ಶೇಕಡಾ 2.13ರಷ್ಟು ಇಳಿಕೆಯಾಗಿದೆ. ಆದರೂ, ಇತರ ಆಹಾರ ಪದಾರ್ಥಗಳು ಏರುಗತಿಯಲ್ಲೇ ಇದ್ದವು.

ಹಣ್ಣು ಹಂಪಲು ಶೇಕಡಾ 22.75ರಷ್ಟು ಹಾಗೂ ಈರುಳ್ಳಿ ಶೇಕಡಾ 21.24 ರಷ್ಟು ವರ್ಷದಿಂದ ವರ್ಷಕ್ಕೆ ಬೆಲೆಯೇರಿಕೆಯಾಗುತ್ತಾ ಬಂದಿದೆ.

ಮೊಟ್ಟೆ, ಮಾಂಸ, ಮೀನಿನ ಬೆಲೆಗಳು ಶೇಕಡಾ 10.12 ರಷ್ಟು, ಬೇಳೆ ಕಾಳುಗಳು ಶೇಕಡಾ 4.26 ರಷ್ಟು ಹಾಗೂ ಹಾಲಿನ ಬೆಲೆ ಶೇಕಡಾ 12.10ರಷ್ಟು ಪ್ರತೀ ವರ್ಷದಂತೆ ಏರಿಕೆಯಾಗುತ್ತಾ ಬಂದಿದೆ.
ಇವನ್ನೂ ಓದಿ