ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಶೇ. 9.90 ಕ್ಕೆ ಏರಿಕೆ (Food inflation | Inflation | Vegetables | Price rise)
ಈರುಳ್ಳಿ, ಹಣ್ಣು ಹಂಪಲು, ತರಕಾರಿ ಮತ್ತಿತರ ಪ್ರೊಟೀನ್‌ಯುಕ್ತ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆಯಾದ್ದರಿಂದ ಆಹಾರ ಹಣದುಬ್ಬರ ಕಳೆದ ನಾಲ್ಕೂವರೆ ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದು, ಜುಲೈ 30ರ ವಾರಾಂತ್ಯದಲ್ಲಿ ಶೇಕಡಾ 9.90 ಕ್ಕೆ ಏರಿಕೆಯಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಅಳೆಯಲಾಗುವ ಆಹಾರ ಹಣದುಬ್ಬರವು ಹಿಂದಿನ ವಾರದಲ್ಲಿ ಶೇಕಡಾ 8.04 ರಷ್ಟಿತ್ತು. ಕಳೆದ ವರ್ಷದ ಜುಲೈ ವಾರಾಂತ್ಯದಲ್ಲಿ ಶೇ.16.45 ಕ್ಕೆ ಏರಿಕೆಯಾಗುವ ಮೂಲಕ ಆಹಾರ ಪದಾರ್ಥಗಳ ಬೆಲೆ ದಾಖಲೆ ಮಟ್ಟವನ್ನು ತಲುಪಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ಬೆಲೆಯಲ್ಲಿ ಶೇಕಡಾ 36.62 ರಷ್ಟು ಮತ್ತು ಹಣ್ಣುಗಳ ಬೆಲೆಯಲ್ಲಿ ಶೇಕಡಾ 16.49 ರಷ್ಟು ದುಬಾರಿಯಾಗಿರುವುದು ಸರಕಾರ ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಸ್ಪಷ್ಟವಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಆಹಾರ ಹಣದುಬ್ಬರ, ಹಣದುಬ್ಬರ, ತರಕಾರಿ, ಹಣ್ಣು ಹಂಪಲು, ಬೆಲೆ ಏರಿಕೆ, ಆರ್ಥಿಕ ಕುಸಿತ