ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಸಕ್ತ ವರ್ಷ ಬಿಎಸ್ಎನ್ಎಲ್‌ಗೆ 6,000 ಕೋಟಿ ರೂ. ನಷ್ಟ (BSNLs loss triples | 3G | Latest News in Kannada | Latest Commerce News)
ಕಳೆದ ವರ್ಷಕ್ಕಿಂತ ಮೂರುಪಟ್ಟು ಹೆಚ್ಚು ನಷ್ಟ ಸಂಭವಿಸಿರುವುದಾಗಿ ತಿಳಿಸಿರುವ ಸರ್ಕಾರಿ ಒಡೆತನದ ದೂರಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್‌, ಪ್ರಸಕ್ತ ಸಾಲಿನಲ್ಲಿ 6,000 ಕೋಟಿ ರೂಪಾಯಿ ನಷ್ಟ ಅನುಭವಿಸಿರುವುದಾಗಿ ಹೇಳಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನೌಕರರ ವೇತನ ಹಾಗೂ ಇನ್ನಿತರ ಸೌಲಭ್ಯ ವೆಚ್ಚ ಹೆಚ್ಚಿದ್ದರಿಂದ ಹಾಗೂ 3ಜಿ ಸೇವೆ ಮತ್ತಿತರ ವೈರ್‌ಲೆಸ್ ಸೇವೆ ಒದಗಿಸಲು ಹೆಚ್ಚು ವೆಚ್ಚ ತಗುಲಿದ್ದರಿಂದ ಇಷ್ಟೊಂದು ಪ್ರಮಾಣದ ನಷ್ಟ ಸಂಭವಿಸಿರುವುದಾಗಿ ಬಿಎಸ್ಎನ್ಎಲ್ ತಿಳಿಸಿದೆ.

2009-10 ನೇ ಸಾಲಿನಲ್ಲಿ 1,823 ಕೋಟಿ ನಷ್ಟ ಸಂಭವಿಸಿತ್ತು, ಇದೀಗ 2010-11ನೇ ಸಾಲಿನಲ್ಲಿ 5,997 ಕೋಟಿ ನಷ್ಟ ಸಂಭವಿಸಿರುವುದಾಗಿ ಬಿಎಸ್ಎನ್ಎಲ್ ಅಂದಾಜಿಸಿದೆ.

3ಜಿ ಸೇವೆ ಮತ್ತಿತರ ವೈರ್‌ಲೆಸ್ ಸೇವೆಗಳ ಪರವಾನಗಿಗಾಗಿ 18,500 ಕೋಟಿ ರೂಪಾಯಿ ಮೊತ್ತವನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿರುವ ಬಿಎಸ್ಎನ್ಎಲ್‌ನ ಹಿರಿಯ ಅಧಿಕಾರಿಗಳು, ಇದರಿಂದಾಗಿಯೇ ನಷ್ಟ ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪರವಾನಗಿಗಾಗಿ ಪಾವತಿಸಿದ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡರೂ, ನಮ್ಮ ಕೋರಿಕೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿರುವುದಾಗಿ ಬಿಎಸ್ಎನ್ಎಲ್ ತಿಳಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಎಸ್ಎನ್ಎಲ್, 3ಜಿ, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ