ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ಕುಸಿದರೂ, ಆಹಾರ ಪದಾರ್ಥಗಳು ದುಬಾರಿ! (Indian Economy | Food inflation | Vegetable prices | Latest News in Kannada | Latest Commerce News)
ಆಹಾರ ಹಣದುಬ್ಬರ ದರ ಕುಸಿತ ಕಂಡರೂ ದಿನಬಳಕೆಯ ಆಹಾರ ಪದಾರ್ಥಗಳ ಬೆಲೆ ಮಾತ್ರ ಎಂದಿನಂತೆ ಏರುಗತಿಯಲ್ಲೇ ಸಾಗುತ್ತಿದೆ. ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಸಗಟು ಬೆಲೆ ಸೂಚ್ಯಂಕದ ಪ್ರಕಾರ, ಹಿಂದಿನ ವಾರದಲ್ಲಿ ಶೇಕಡಾ 9.47 ರಷ್ಟಿದ್ದ ಆಹಾರ ಹಣದುಬ್ಬರ ದರ ಸೆಪ್ಟೆಂಬರ್ 10ರ ವಾರಾಂತ್ಯದಲ್ಲಿ ಶೇಕಡಾ 8.84 ಕ್ಕೆ ಕುಸಿದಿದ್ದರೂ, ಗೋಧಿ ಹೊರತುಪಡಿಸಿ ಉಳಿದ ಆಹಾರ ಪದಾರ್ಥಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗದೇ ಏರುತ್ತಲೇ ಇರುವುದು ಕಂಡುಬಂದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಾರಾಂತ್ಯದ ಅವಧಿಯಲ್ಲಿ ಹಣದುಬ್ಬರ ದರ ಕುಸಿದಿರುವುದನ್ನು ಇದೊಂದು ಮಹತ್ವದ ಪರಿಣಾಮ ಎಂದಿರುವ ಆರ್ಥಿಕ ತಜ್ಞರು, ಕಳೆದ ವರ್ಷದ ಇದೇ ವೇಳೆಗೆ ಆಹಾರ ಹಣದುಬ್ಬರ ಶೇಕಡಾ 16 ಕ್ಕಿಂತಲೂ ಅಧಿಕ ಮಟ್ಟವನ್ನು ತಲುಪಿತ್ತು ಎಂದಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷದ ಇದೇ ಅವಧಿಯಲ್ಲಿ ಸಗಟು ಗೋಧಿ ಬೆಲೆಯು ಶೇಕಡಾ 2.72 ರಷ್ಟು ಕಡಿಮೆ ಇತ್ತು.

ಆದರೆ, ಈರುಳ್ಳಿ ಶೇಕಡಾ 29 ರಷ್ಟು ಏರಿಕೆಯಾಗಿದ್ದರೆ, ಆಲೂಗಡ್ಡೆ ಶೇಕಡಾ 13.78 ರಷ್ಟು ಬೆಲೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಒಟ್ಟಾರೆ ತರಕಾರಿ ಬೆಲೆ ಶೇಕಡಾ 12.13 ಏರಿಕೆಯಾಗಿದೆ.

ಹಾಲಿನ ಬೆಲೆ ಕೂಡ ಶೇಕಡಾ 10.38 ರಷ್ಟು ಏರಿಕೆಯಾಗಿದ್ದು, ಹಣ್ಣು ಹಂಪಲುಗಳ ಬೆಲೆ ಶೇಕಡಾ 17.67ರಷ್ಟು ಏರಿದೆ. ಮೊಟ್ಟೆ, ಮೀನು, ಮಾಂಸದ ಬೆಲೆಯಲ್ಲೂ ಶೇಕಡಾ 9.28 ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಆಹಾರ, ತರಕಾರಿ, ಹಣ್ಣು ಹಂಪಲು, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ