ಮಾರುಕಟ್ಟೆ ದರ | ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ರಾಯ್ ಶಿಫಾರಸು ಆಧರಿಸಿ ವೀಡಿಯೋಕಾನ್ ಮುಂದಿನ ಹೆಜ್ಜೆ (Videocon | Trai Recommendation | Supreme Court | Trai | Latest News in Kannada)
ದೂರಸಂಪರ್ಕ ಸೇವಾವಲಯದಲ್ಲಿ ತನ್ನ ಮುಂದಿನ ನಿರ್ಧಾರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೀಡಿಯೋಕಾನ್ ದೂರಸಂಪರ್ಕ ಸಂಸ್ಥೆ, ಈ ಕುರಿತು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ತೆಗೆದುಕೊಳ್ಳುವ ಶಿಫಾರಸಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ನಾವು ಮುಂದಿನ ನಾಲ್ಕು ತಿಂಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಆನಂತರವಷ್ಟೇ ಕ್ರಮಬದ್ದವಾಗಿ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿರುವುದಾಗಿ ವೀಡಿಯೊಕಾನ್ ಟೆಲಿಕಮ್ಯುನಿಕೇಶನ್ಸ್ ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಧೂಟ್ ಅವರು ಸ್ಪಷ್ಟಪಡಿಸಿದ್ದಾರೆ.

2ಜಿ ಅಕ್ರಮ ತರಂಗಾಂತರ ವಿತರಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ 122 ಪರವಾನಗಿಗಳಲ್ಲಿ ವೀಡಿಯೋಕಾನ್ ದೂರಸಂಪರ್ಕ ಪರವಾನಗಿಯೂ ಸೇರಿರುವುದರಿಂದ ಈಗಾಗಲೇ ಸಾಕಷ್ಟು ಗ್ರಾಹಕರನ್ನು ಸಂಪಾದಿಸಿದ್ದ ವೀಡಿಯೊಕಾನ್ ವ್ಯವಹಾರಕ್ಕೆ ದಕ್ಕೆಯುಂಟಾಗಿದೆ.
ಇವನ್ನೂ ಓದಿ
WebduniaWebdunia