ಬಜೆಟ್‌ನಲ್ಲಿ ದೂರದಷ್ಟಿ ಯೋಜನೆಗಳಿಲ್ಲ: ವಿಶ್ಲೇಷಕರು

ನವದೆಹಲಿ, ಮಂಗಳವಾರ, 27 ಮಾರ್ಚ್ 2012 (11:45 IST)

PTI
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎಲ್ಲ ವರ್ಗದವರನ್ನು ಖುಷಿ ಪಡಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಇದು ಅಭಿವೃದ್ಧಿಪರವಾದ ಬಜೆಟ್ ಅಲ್ಲ. ರಾಜ್ಯದ ವಿಕಾಸಕ್ಕೆ ಅನುಕೂಲವಾಗುವ ದೂರದೃಷ್ಟಿಯ ಯೋಜನೆಗಳು ಕಾಣುತ್ತಿಲ್ಲವೆಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬಜೆಟ್ ವೆಚ್ಚ ಶೇ 20ರಷ್ಟು ಹೆಚ್ಚಾಗಿದೆ. ಆದರೆ ಅಭಿವೃದ್ಧಿ ವೆಚ್ಚ ಜಾಸ್ತಿಯಾಗಿಲ್ಲ. ರೆವೆನ್ಯೊ ಕೊರತೆಯೂ ಹೆಚ್ಚಳವಾಗಿದೆ. ಹಣದುಬ್ಬರ ಜಾಸ್ತಿಯಾಗಬಹುದು. ಬಡವರಿಗೆ ವಿನಾಯಿತಿ ನೀಡಿ, ಶ್ರೀಮಂತರಿಗೆ ತೆರಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಬಡವರಿಗೆ ಅನುಕೂಲವಾಗುವುದಿಲ್ಲ. ತೆರಿಗೆ ವಿನಾಯಿತಿಯ ನೇರ ಲಾಭ ಬಡವರಿಗೆ ಸಿಗುವುದಿಲ್ಲ.ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಅನು ಷ್ಠಾನವಾಗಿಲ್ಲ ಇಲಾಖಾವಾರು ಹಂಚಿಕೆಯಾಗಿದ್ದ ಹಣ ಖರ್ಚಾಗಿಲ್ಲ. ಒಟ್ಟಾರೆ ಬಜೆಟ್ ವೆಚ್ಚ ಶೇ 20ರಷ್ಟು ಜಾಸ್ತಿಯಾಗಿದ್ದರೂ, ಸಕಾರಾತ್ಮಕವಾಗಿ ಕಾಣುತ್ತಿಲ್ಲ.

ವೈದ್ಯಕೀಯ ಪದವೀಧರರಿಗೆ ಗ್ರಾಮೀಣ ಪ್ರದೇಶದ ಸೇವೆಯನ್ನು ಕಡ್ಡಾಯಗೊಳಿಸುವುದು ಒಳ್ಳೆಯ ನಿರ್ಧಾರ. ಆದರೆ ಅದನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗುತ್ತದೆ ಎಂಬುದು ಮುಖ್ಯ. ಇದು ಕೇವಲ ಘೋಷಣೆಯಾಗಿ ಉಳಿಯಬಾರದು. ಎಲ್ಲ ವರ್ಗದವರನ್ನು ತೃಪಿಪಡಿಸುವ ಕೆಲಸ ಬಜೆಟ್‌ನಲ್ಲಿ ಆಗಿದೆ.

ಆದರೆ ಹೇಗೆ ಅನುಷ್ಠಾನಗೊಳಿಸುತ್ತೀರಿ ಎಂಬುದು ಮುಖ್ಯ. ಅಬಕಾರಿ ತೆರಿಗೆ ಜಾಸ್ತಿ ಮಾಡಿರುವುದರಿಂದ ಆದಾಯ ಹೆಚ್ಚಳವಾಗುತ್ತದೆ ನಿಜ. ಆದರೆ ಅಭಿವೃದ್ಧಿಗೆ ಪ್ರೋತ್ಸಾಹ ಕೊಟ್ಟಿರುವಂತಹ ಕಾರ್ಯಕ್ರಮಗಳು ಕಂಡು ಬರುತ್ತಿಲ್ಲ. ಇರುವುದರಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿಗೆ ಸ್ವಲ್ಪ ಒತ್ತು ಸಿಕ್ಕಿದೆ.

ಬಜೆಟ್ ಮಹತ್ವ 2-3 ದಿನಗಳಲ್ಲಿ ಗೊತ್ತಾಗಲಿದೆ. ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂಬ ಊಹಾಪೋಹಗಳು ಕೇಳಿ ಬರುತ್ತಿರುವುದರಿಂದ ಬಜೆಟ್ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಅನುಷ್ಠಾನವಾಗುತ್ತವೆ ಎಂಬುದನ್ನು ಈಗಲೇ ಹೇಳುವುದು ಕಷ್ಟ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  
Widgets Magazine

ವ್ಯವಹಾರ

ಚೀನಾದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌‌‌‌ಸಂಗ್‌‌‌ ಗ್ಯಾಲೆಕ್ಸಿ ಎಸ್‌‌‌‌‌‌5

ಕೊರಿಯಾದ ಕಂಪೆನಿಯಾದ ಸ್ಯಾಮ್‌‌ಸುಂಗ್‌‌‌ ಕಂಪೆನಿ ಸ್ಯಾಮ್‌ಸುಂಗ್‌ ಗ್ಯಾಲಾಕ್ಸಿ ಎಸ್‌‌‌‌‌‌5 ಡ್ಯುವೆಲ್‌‌ ...

ವೋಟ್‌‌ ಮಾಡಿ, ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌ ಖರೀದಿಸಿ

ನವದೆಹಲಿ: ದೆಹಲಿ ಮತ್ತು ದೆಹಲಿ ಹತ್ತಿರವಿರುವ ಪ್ರದೇಶಗಳಲ್ಲಿ ಮತದಾನ ಮಾಡುವವರಿಗೆ ಒಂದು ಖುಷಿಯಾದ ...

ಭಾರತದಲ್ಲಿ 10 ಕೋಟಿಗೆ ತಲುಪಿದ ಫೇಸ್‌‌ಬುಕ್‌ ಬಳಕೆದಾರರ ಸಂಖ್ಯೆ

ನವದೆಹಲಿ: ಸೋಷಿಯಲ್ ನೆಟ್‌‌‌ವರ್ಕಿಂಗ್‌‌‌ ಸೈಟ್‌‌‌ ಫೇಸ್‌ಬುಕ್‌‌‌ನ ಬಳಕೆ ದಿನೆ ದಿನೆ ಹೆಚ್ಚಾಗುತ್ತಲಿದೆ. ...

ಫಾರೆಕ್ಸ್‌‌‌‌:ರೂಪಾಯಿಯಲ್ಲಿ 26 ಪೈಸೆ ಚೇತರಿಕೆ

ಮುಂಬೈ : ಅಂತರ ಬ್ಯಾಂಕ್‌ ವಿದೇಶೀ ವಿನಿಮಯ ಮಾರುಕಟ್ಟೆ (ಫಾರೆಕ್ಸ್‌‌‌‌)ನಲ್ಲಿ ಇಂದು ವಹಿವಾಟಿನ ...

Widgets Magazine

 

Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ...