ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ಷೇರುಸೂಚ್ಯಂಕ
 
ಆರಂಭದಲ್ಲೇ ಏರಿಕೆ ಕಂಡ ಮುಂಬೈ ಷೇರು ಸೂಚ್ಯಂಕ
webdunia
BSE
AP
ಇಳಿಕೆಯೊಂದಿಗೆ ಬುಧವಾರದ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದ್ದ ಬಾಂಬೆ ಷೇರು ಸೂಚ್ಯಂಕವು, ಗುರುವಾರ ಆರಂಭದಲ್ಲೇ ಏರಿಕೆಯ ವಹಿವಾಟು ಪ್ರಾರಂಭಿಸಿದೆ.

ಅದರಲ್ಲಿ ಸುಮಾರು 149.93 ಪಾಯಿಂಟ್‌ಗಳ ಏರಿಕೆ ಕಂಡು ಬಂದಿದ್ದು, 13,931.44 ಪಾಯಿಂಟ್‌ಗಳಿಗೆ ಸ್ಥಿರಗೊಂಡಿತ್ತು. ಇಂದಿನ ವಹಿವಾಟಿನಲ್ಲಿ ಎಸಿಸಿ, ಹಿಂಡಾಲ್ಕೊ ಹಾಗೂ ಎಚ್ಎಲ್ಎಲ್ ಕಂಪೆನಿಗಳು ಏರಿಕೆಯ ಪಟ್ಟಿಯಲ್ಲಿ ಕಂಡು ಬಂದರೆ, ರಾನ್‌ಬಾಕ್ಸಿ, ಅದ್ನಾನಿ ಹಾಗೂ ಕ್ರಾಂಫ್ಟನ್ ಗ್ರೀವ್ಸ್‌ ಕಂಪೆನಿಗಳು ಕುಸಿತ ಅನುಭವಿಸಿದ್ದವು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯಲ್ಲಿಯೂ ಆರಂಭದ ಏರಿಕೆ ಕಂಡು ಬಂದಿದ್ದು, 44.65 ಪಾಯಿಂಟ್‌ಗಳ ಸುಧಾರಣೆ ಕಾಣುವ ಮೂಲಕ 4,123.95 ಕ್ಕೆ ಸ್ಥಿರಗೊಂಡಿತ್ತು.