ಮುಂಬಯಿ ಸೂಚ್ಯಂಕ ಕಳೆದ ಮೂರು ಅವಧಿಗಳಲ್ಲಿ 310 ಪಾಯಿಂಟ್ ಕಳೆದುಕೊಂಡಿತ್ತು. ಬುಧವಾರ ವಹಿವಾಟು ಪ್ರಾರಂಭವಾದ ಐದು ನಿಮಿಷದಲ್ಲಿ 13,698.89 ಹಂತದಲ್ಲಿ 66.57 ಪಾಯಿಂಟ್ ಕುಸಿತ ದಾಖಲಿಸಿದೆ.
ರಾಷ್ಟ್ರೀಯ ಷೇರು ಸೂಚ್ಯಂಕವು ಕೂಡ 4,060.10 ಹಂತದಲ್ಲಿ 16.90 ಪಾಯಿಂಟ್ ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರಿಜ್, ರಿಲಯನ್ಸ್ ಕ್ಯಾಪಿಟಲ್, ಹಿಂದುಸ್ತಾನ್ ಲಿವರ್, ಐಟಿಸಿ ಲಿ., ರಾನ್‌ಬ್ಯಾಕ್ಸಿ ಲ್ಯಾಬ್ ಮತ್ತು ಸ್ಟರ್‌ಲೈಟ್ ಇಂಡಸ್ಟ್ರೀಜ್ ಷೇರುಗಳು ಕುಸಿತ ಕಂಡಿವೆ.
|