ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ಷೇರುಸೂಚ್ಯಂಕ
 
ಸೆನ್ಸೆಕ್ಸ್: 14,303.41ರಲ್ಲಿ 13 ವಾರದ ಏರಿಕೆ ಅಂತ್ಯ
webdunia
BSE
PTI
ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ ಸೂಚ್ಯಂಕವು ಸಕಾರಾತ್ಮಕ ಅಂಶಗಳ ಅನಿರೀಕ್ಷಿತ ಹೆಚ್ಚಳದಿಂದಾಗಿ 14,303.41ರ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.

ಸೂಚ್ಯಂಕವು ಏರುವುದರ ಮೂಲಕ ಈ ವಾರ ಪ್ರತಿಶತ 3.68ರಿಂದ 13 ವಾರಗಳ ಅವಧಿಯ ಏರಿಕೆ ಮುಕ್ತಾಯಗೊಳಿಸಿದೆ.

ನಿಫ್ಟಿಯು ರಾಷ್ಟ್ರೀಯ ಷೇರು ವಿನಿಮಯ(ಎನ್ಎಸ್ಇ)ದ ಇತಿಹಾಸದಲ್ಲಿ ಮೊದಲ ಬಾರಿಗೆ 4200 ಮಾರ್ಕ್ ಮೇಲೆ ತನ್ನ ವಾರಾಂತ್ಯವನ್ನು ದಾಖಲಿಸಿದೆ.

ಉತ್ತಮ ಕಾರ್ಪೋರೆಟ್ ಕ್ಯು4 ಗಳಿಕೆಗಳು, ಭಾರೀ ಜಾಗತಿಕ ಸೂಚನೆಗಳು, ಅವಧಿಗೂ ಮುಂಚಿನ ಮಾನ್ಸೂನ್ ರಂಗೇರುವ ವರದಿ, ಲೋಕಸಭೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತಿದ್ದುಪಡಿ ಮಸೂದೆ 2006 ಹಾಗೂ ಘಟಾನುಘಟಿ ಆರ್ಐಎಲ್‌ನ ಅನಿಲ ಶೋಧ ಮುಖ್ಯವಾಗಿ ಮಾರುಕಟ್ಟೆ ಸಂವೇದನೆಯನ್ನು ವೃದ್ಧಿಸಿತು ಎಂದು ವರ್ತಕರು ತಿಳಿಸಿದ್ದಾರೆ.

ಎಸ್‌ಬಿಐ ನಾಲ್ಕನೇ ವರ್ಷಾಂತ್ಯಕ್ಕೆ ನಿವ್ವಳ ಲಾಭದಲ್ಲಿ ಅದ್ಭುತವಾದ ಶೇ.75 ಬೆಳವಣಿಗೆಯನ್ನು ಪ್ರಕಟಿಸಿದ್ದರಿಂದಾಗಿ ಹಾಗೂ ಲೋಕಸಭೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತಿದ್ದುಪಡಿ ಮಸೂದೆ 2006ಯಿಂದಾಗಿ ಬ್ಯಾಂಕಿಂಗ್ ಷೇರುಗಳು ರಾಲಿಯ ನೇತೃತ್ವ ವಹಿಸಿದ್ದವು

ಮಸೂದೆಯು ಎಸ್‌ಬಿಐ ತನ್ನ ಏಳು ಅಧೀನ ಬ್ಯಾಂಕುಗಳಲ್ಲಿ ಷೇರುಗಳನ್ನು ಶೇ.51ರಷ್ಟು ಇಳಿಸುವುದಕ್ಕೆ ಅವಕಾಶ ನೀಡಿದ್ದು, ಇದು ಹೊಸ ಅಂತಾರಾಷ್ಟ್ರೀಯ ಅಪಾಯ ಮತ್ತು ಬೆಳವಣಿಗೆ ಯೋಜನೆಗಳನ್ನು ಪೂರೈಸಲು ಎಸ್‌ಬಿಐ ಹೆಚ್ಚುವರಿ ಬಂಡವಾಳವನ್ನು ಹೊಂದುವಂತೆ ಮಾಡುತ್ತದೆ.

ಬಾಂಬೆ ಷೇರು ವಿನಿಮಯ ಕೇಂದ್ರ(ಬಿಎಸ್ಇ) 30 ಷೇರು ಸೂಕ್ಷ್ಮ ಸೂಚ್ಯಂಕ, ಸೆನ್ಸೆಕ್ಸ್, ಕಳೆದ ವಾರಾಂತ್ಯದ ಮುಕ್ತಾಯ 13,796.16ರ ಮೇಲೆ ಕಡಿದಾದ ಏರಿಕೆಯನ್ನು ಕಂಡು 14,303.41ಕ್ಕೆ ವಾರಾಂತ್ಯಗೊಳಿಸುವ ಮುನ್ನ 14,352 ಮತ್ತು 13,885.46 ಶ್ರೇಣಿಯಲ್ಲಿ ಏರಿಳಿತ ಕಂಡಿತು.