ನಿಫ್ಟಿಯಲ್ಲಿ ನೂತನ ದಾಖಲೆ ಏರಿಕೆ ಕಂಡಿರುವ ಷೇರು ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿಯೂ ಏರುಮುಖದತ್ತ ದಾಪುಗಾಲು ಹಾಕಿದೆ.
ಬೆಳಗಿನ ತನ್ನ ಆರಂಭಿಕ ವಹಿವಾಟಿನಲ್ಲಿಯೇ 46.92 ಪಾಯಿಂಟ್‌ಗಳ ಚೇತರಿಕೆ ಕಂಡ ಬಾಂಬೆ ಷೇರು ಸೂಚ್ಯಂಕವು 14,500.64 ಅಂಕಿ ಅಂಶಗಳಿಗೆ ಸ್ಥಿರಗೊಂಡಿತ್ತು.
ಇಂದಿನ ಪ್ರಮುಖ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಶೇ. 2 ರಷ್ಟು, ಬಜಾಜ್ ಆಟೊ, ಹಿಂಡಾಲ್ಕೊ ಮತ್ತು ಗುಜರಾತ್ ಅಂಬುಜಾ ಕಂಪೆನಿಗಳು ಶೇ. 1.5 ರಷ್ಟು ಚೇತರಿಕೆ ವಹಿವಾಟು ನಡೆಸಿದ್ದವು.
ಅದೇ ರೀತಿ ಎಚ್‌ಡಿಎಫ್‌ಸಿ ಮತ್ತು ಬಿಎಚ್ಇಎಲ್‌ಗಳಲ್ಲಿಯೂ ಸುಧಾರಣೆ ಕಂಡುಬಂದಿತ್ತು. ಆದರೆ, ರಿಲಯನ್ಸ್ ಎನರ್ಜಿ, ಓಎನ್‌ಜಿಸಿಗಳಲ್ಲಿ ಎಸ್‌ಬಿಐ ಹಾಗೂ ಐಟಿಸಿಗಳಲ್ಲಿ ಶೇ. 1 ರಷ್ಟು, ಕುಸಿತ ಕಂಡು ಬಂದಿದ್ದವು.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯಲ್ಲಿಯೂ ಸಹ 13.30 ಪಾಯಿಂಟ್‌ಗಳು ಚೇತರಿಕೆ ಕಂಡು ಬಂದಿತ್ತು. ಇದರಿಂದ ನಿಫ್ಟಿಯು 4191.40 ಪಾಯಿಂಟ್‌ಗಳಿಗೆ ಸ್ಥಿರಗೊಂಡಿತ್ತು.
|