ಜಾಗತಿಕ ಶೇರು ಮಾರುಕಟ್ಟೆಯಲ್ಲಿನ ದುರ್ಬಲ ಶೇರು ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲದ ಬೆಲೆಯು ಮತ್ತಷ್ಟು ಹಣದುಬ್ಬರ ಪ್ರಮಾಣದ ಹೆಚ್ಚಳಕ್ಕೆ ಇಂಬು ನೀಡುವ ಕಳವಳ ಶೇರು ಪೇಟೆಯಲ್ಲಿ ವ್ಯಕ್ತವಾದ ಕಾರಣ ದಿನದ ಪ್ರಾಥಮಿಕ ಅವಧಿಯಲ್ಲಿ ಮುಂಬೈ ಶೇರು ವಿನಿಮಯ ಕೇಂದ್ರವು 257 ಅಂಶಗಳ ಕುಸಿತವನ್ನು ದಾಖಲಿಸಿತು.
ಹಣದುಬ್ಬರದ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಕಳವಳ ಶೇರು ಪೇಟೆಯಲ್ಲಿ ವ್ಯಕ್ತವಾಗಿರುವ ಕಾರಣ ಮುಂಬೈ (257) ಮತ್ತು ನಿಫ್ಟಿ (57) ಸಂವೇದಿ ಸೂಚ್ಯಂಕಗಳು ದಿನದ ಪ್ರಾಥಮಿಕ ಅವಧಿಯ ವಹಿವಾಟಿನಲ್ಲಿ ಕುಸಿತ ದಾಖಲಿಸಿವೆ. ಬಿಎಸ್ಇ 17,082.03 ಮತ್ತು ನಿಫ್ಟಿ 5170ಕ್ಕೆ ಸ್ಥಿರಗೊಂಡಿವೆ.
ಕಳೆದ ಎರಡು ದಿನಗಳ ಕುಸಿತವನ್ನು ಮಂದುವರಿಸಿರುವ ಮುಂಬೈ ಮತ್ತು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರಗಳು ಗುರುವಾರದ ಪ್ರಾಥಮಿಕ ಅವಧಿಯ ವಹಿವಾಟಿನಲ್ಲಿ ಅದೇ ಪ್ರವೃತ್ತಿಯನ್ನು ಮುಂದುವರಿಸಿದವು. ಬಿಎಸ್ಇ-30 ಸೂಚ್ಯಂಕ ಪಟ್ಟಿಯು 257 ಅಂಶಗಳ ನಷ್ಟದ ನಂತರ 17.082.03ಕ್ಕೆ ತಲುಪಿದ್ದರೆ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರವು ಪ್ರಾಥಮಿಕ ಅವಧಿಯಲ್ಲಿ 57 ಅಂಶಗಳ ನಷ್ಟದ ನಂತರ 5078ಕ್ಕೆ ಸ್ಥಿರಗೊಂಡಿತು.
ಇಂದಿನ ಶೇರು ಮಾರುಕಟ್ಟೆಯ ಮೊದಲ ಸುತ್ತಿನ ಅವಧಿಯಲ್ಲಿ ಸತ್ಯಮ್ ಕಂಪ್ಯೂಟರ್ಸ್, ಐಟಿಸಿ, ಇನ್ಫೋಸಿಸ್ ಟೆಕ್ನಾಲಜಿಸ್, ವಿಪ್ರೊ, ಟಿಸಿಎಸ್ ಶೇರುಗಳ ಮೌಲ್ಯವು ಸರಾಸರಿ ಶೇ 3ಕ್ಕಿಂತ ಹೆಚ್ಚಿಗೆ ದಾಖಲಾಯಿತು.
ಕಳೆದ ಇನ್ನೂರು ದಿನಗಳ ಅವಧಿಯಲ್ಲಿ ನಿಫ್ಟಿ ಸಂವೇದಿ ಸೂಚ್ಯಂಕವು ಸರಾಸರಿ 5170ರ ಆಸುಪಾಸಿನಲ್ಲಿ ವಹಿವಾಟು ಸ್ಥಗಿತಗೊಳಿಸಿರುವ ಕಾರಣ ನಿಫ್ಟಿ ಸಂವೇದಿ ಸೂಚ್ಯಂಕವು 5200ನ್ನು ತಲುಪುವುದು ಸದ್ಯದಲ್ಲಿ ಸಾಧ್ಯವಿಲ್ಲ ಎಂದು ಅಸೀತ್ ಸಿ ಮೆಹ್ತಾ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
|