ಕಳೆದ ಐದು ದಿನಗಳಲ್ಲಿ ನಿರಂತರ ಕುಸಿತವನ್ನು ಕಂಡಿದ್ದ ಶೇರುಪೇಟೆಯು ಪ್ರಬಲ ಶೇರುಗಳ ಖರೀದಿ ಭರಾಟೆಯಿಂದಾಗಿ ಸುಮಾರು 100 ಅಂಕಗಳಷ್ಟು ಚೇತರಿಕೆಯ ಮೂಲಕ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.
ಆರಂಭಿಕ ಕುಸಿತದಲ್ಲೇ ವಹಿವಾಟನ್ನು ಪ್ರಾಂಭಿಸಿದ್ದ ಸೆನ್ಸೆಕ್ಸ್, ಅಂತ್ಯದಲ್ಲಿಯೂ ಕುಸಿತ ಕಾಣುವ ನಿರೀಕ್ಷೆಯಿತ್ತು. ಆದರೆ ಸೂಚ್ಯಂಕವು 113.49ರಷ್ಟು ಏರುವ ಮೂಲಕ 14,220.07 ಅಂಕಗಳಿಗೆ ತಲುಪಿ ನಿರೀಕ್ಷೆಯನ್ನು ಹುಸಿ ಮಾಡಿದೆ.
ಅದೇ ರೀತಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು ಕೂಡಾ 61.55ರಷ್ಟು ಏರಿಕೆಗೊಂಡು 4,252.65 ಅಂಕಗಳಿಗೆ ತಲುಪಿದೆ.
|