ಹಣದುಬ್ಬರ ಏರಿಕೆ, ಮಂದ ಜಾಗತಿಕ ಮಾರುಕಟ್ಟೆ ಮತ್ತು ಕಚ್ಛಾತೈಲ ಬೆಲೆಯ ದಾಖಲೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಸುಮಾರು 600 ಅಂಕಗಳ ಕುಸಿತದೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿದೆ.
ಮಧ್ಯಂತರ ವಹಿವಾಟಿನಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದ್ದ ಸೂಚ್ಯಂಕವು ನಂತರ, 619.60 ಅಂಕಗಳಷ್ಟು ಇಳಿಕೆಗೊಳ್ಳುವ ಮೂಲಕ 13,802.22 ಅಂಕಗಳಿಗೆ ತಲುಪಿದೆ.
ಅಂತೆಯೇ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 179.20 ಅಂಕಗಳಷ್ಟು ಕುಸಿತಗೊಂಡು 4,136.65 ಅಂಕಗಳಿಗೆ ತಲುಪಿದೆ.
ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಶೇರುಗಳು 21 ತಿಂಗಳಲ್ಲೇ ಅಧಿಕ ಮಟ್ಟದಲ್ಲಿ ಕುಸಿತಗೊಂಡಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇರುಗಳು ಶೇ.8.15ಕ್ಕೆ ಇಳಿದಿದೆ.
ಉಳಿದಂತೆ, ರಿಲಾಯನ್ಸ್ ಇನ್ಫ್ರಾ ಶೇ.7.72, ಇನ್ಫೋಸಿಸ್ ಶೇ.4.17, ರಿಲಾಯನ್ಸ್ ಇಂಡಸ್ಟ್ರೀಸ್ ಶೇ.2.56 ಮತ್ತು ವಿಪ್ರೋ ಶೇ.7.78ಕ್ಕೆ ಇಳಿಮುಖಗೊಂಡಿದೆ.
|