ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
56 ಅಂಕಗಳ ಆರಂಭಿಕ ಕುಸಿತದಲ್ಲಿ ಶೇರುಪೇಟೆ  Search similar articles
ಬ್ಯಾಂಕಿಂಗ್, ಸ್ಥಿರಾಸ್ಥಿ ಕ್ಷೇತ್ರಗಳ ಪ್ರಬಲ ಶೇರುಗಳ ಮೌಲ್ಯ ಇಳಿಕೆಯ ಕಾರಣದಿಂದ ಉಂಟಾದ ಮಾರಾಟ ಭರಾಟೆಯಿಂದಾಗಿ, ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 56 ಅಂಕಗಳ ಇಳಿಕೆಯಲ್ಲಿ ವಾರದ ವಹಿವಾಟನ್ನು ಪ್ರಾರಂಭಿಸಿದೆ.

ಶುಕ್ರವಾರ ಸುಮಾರು 620 ಅಂಕಗಳ ಕುಸಿತದೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿದ್ದ ಶೇರುಪೇಟೆಯು, ಇಂದು ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ ಮತ್ತೆ 55.83 ಅಂಕಗಳಷ್ಟು ಕುಸಿಯುವ ಮೂಲಕ 13,746.39 ಅಂಕಗಳಿಗೆ ತಲುಪಿದೆ.

ಅದೇ ರೀತಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 17.25ರಷ್ಟು ಇಳಿಕೆಗೊಂಡಿದ್ದು, 4,119.40 ಅಂಕಗಳಿಗೆ ತಲುಪಿದೆ.

ಹೆಚ್ಚುತ್ತಿರುವ ಹಣದುಬ್ಬರವು ಶೇರುಪೇಟೆ ಕುಸಿತದ ಮುಖ್ಯ ಕೇಂದ್ರಬಿಂದುವಾಗಿದ್ದು, ಹಣದುಬ್ಬರ ಕುರಿತಾದ ಆತಂಕವು ಹೂಡಿಕೆದಾರರಲ್ಲಿ ಹೆಚ್ಚಳಗೊಂಡ ಕಾರಣ ಈ ಕುಸಿತ ಉಂಟಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಮತ್ತಷ್ಟು
ಸೂಚ್ಯಂಕ: 600 ಅಂಕಗಳ ಕುಸಿತ
536 ಅಂಕಗಳ ಆರಂಭಿಕ ಕುಸಿತ ಕಂಡ ಶೇರುಪೇಟೆ
ಸೆನ್ಸೆಕ್ಸ್: 200 ಅಂಕಗಳ ಏರಿಕೆ
170 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಸೆನ್ಸೆಕ್ಸ್: 100 ಅಂಕಗಳ ಚೇತರಿಕೆ
ಸೆನ್ಸೆಕ್ಸ್: 375 ಅಂಕಗಳ ಕುಸಿತ