ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆನ್ಸೆಕ್ಸ್: 71 ಅಂಕಗಳ ಕುಸಿತ  Search similar articles
ಬ್ಯಾಂಕಿಂಗ್ ಮತ್ತು ಸ್ಥಿರಾಸ್ಥಿ ಕ್ಷೇತ್ರಗಳಲ್ಲಿನ ಪ್ರಬಲ ಶೇರುಗಳ ಮಾರಾಟ ಭರಾಟೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 71 ಅಂಕಗಳಷ್ಟು ಇಳಿಕೆ ಕಂಡಿದೆ.

ಕಳೆದ ಎರಡು ವಹಿವಾಟುಗಳಲ್ಲಿ ಸುಮಾರು 960 ಅಂಕಗಳನ್ನು ಕಳೆದುಕೊಂಡಿದ್ದ ಶೇರುಪೇಟೆಯು ಇಂದು ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ 70.67 ಅಂಕಗಳಷ್ಟು ಇಳಿಕೆಗೊಳ್ಳುವ ಮೂಲಕ 13,390.93 ಅಂಕಗಳಿಗೆ ತಲುಪಿದೆ.

ಅದೇ ರೀತಿ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 30 ಅಂಕಗಳಷ್ಟು ಇಳಿಕೆಗೊಂಡಿದ್ದು, 4,010.55 ಅಂಕಗಳಿಗೆ ತಲುಪಿದೆ.

ಹೆಚ್ಚಿನ ಬ್ಯಾಂಕುಗಳು ಸಾಲಬಡ್ಡಿದರವನ್ನು ಹೆಚ್ಚಿಗೊಳಿಸಿದ ವರದಿ ಪ್ರಕಟವಾದ ಬೆನ್ನಲ್ಲೇ ಶೇರುಪೇಟೆಯಲ್ಲಿ ಈ ಪ್ರತಿಕ್ರಿಯೆ ಉಂಟಾಗಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.
ಮತ್ತಷ್ಟು
ಸೂಚ್ಯಂಕ: 341 ಅಂಕಗಳ ಇಳಿಕೆ
56 ಅಂಕಗಳ ಆರಂಭಿಕ ಕುಸಿತದಲ್ಲಿ ಶೇರುಪೇಟೆ
ಸೂಚ್ಯಂಕ: 600 ಅಂಕಗಳ ಕುಸಿತ
536 ಅಂಕಗಳ ಆರಂಭಿಕ ಕುಸಿತ ಕಂಡ ಶೇರುಪೇಟೆ
ಸೆನ್ಸೆಕ್ಸ್: 200 ಅಂಕಗಳ ಏರಿಕೆ
170 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್