ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್‌ಫೋಸಿಸ್ ನೇತೃತ್ವದಲ್ಲಿ ಹೆವಿವೇಟ್ ಸ್ಟಾಕುಗಳ ಖರೀದಿ ಭರಾಟೆಯಿಂದ ಪ್ರೇರಣೆ ಪಡೆದ ಮುಂಬಯಿ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆಕ್ಸ್, ಬುಧವಾರ ಆರಂಭಿಕ ವಹಿವಾಟಿನ ವೇಳೆ 181 ಅಂಕಗಳ ಏರಿಕೆ ಕಂಡಿತು.
ಮಂಗಳವಾರ 13 ಸಾವಿರಕ್ಕಿಂತಲೂ ಕೆಳಗಿಳಿದು ಆತಂಕ ಸೃಷ್ಟಿಸಿದ್ದ 30 ಶೇರುಗಳ ಸೂಚ್ಯಂಕವು, 181.50 ಅಂಕ ಹೆಚ್ಚಳಗೊಂಡು 13,143.18ಕ್ಕೆ ತಲುಪಿತು.
ಇನ್ನೊಂದೆಡೆ, ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿಯು ಕೂಡ 48.40 ಅಂಕ ಚೇತರಿಕೆ ಕಂಡು 3945.15ಕ್ಕೆ ತಲುಪಿದೆ.
|