ಸತತ ಮೂರು ದಿನಗಳ ಇಳಿಕೆ ಕಂಡಿದ್ದ, ಮುಂಬೈ ಶೇರು ಪೇಟೆಯು ಮಂಗಳವಾರದ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸಂವೇದಿ ಸೂಚ್ಯಂಕ 703 ಅಂಕಗಳ ಏರಿಕೆ ಕಂಡಿದೆ. ಕಳೆದ ಹತ್ತು ವಾರಗಳಲ್ಲಿ ಇದು ಅತಿ ದೊಡ್ಡ ಏರಿಕೆಯಾಗಿದೆ.
ಕಳೆದ ಮೂರು ವಹಿವಾಟುಗಳಲ್ಲಿ 1,460 ಅಂಕಗಳನ್ನು ಕಳೆದುಕೊಂಡಿರುವ ಶೇರು ಸೂಚ್ಯಂಕ, ಸೋಮವಾರ 702.94 ಅಂಕಗಳನ್ನು ಪಡೆದಿದ್ದು, 13,664 ಅಂಕಗಳಿಗೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಸೂಚ್ಯಂಕವು 13,000 ಅಂಕಗಳಿಗಿಂತಲೂ ಕೆಳಗಿಳಿದಿತ್ತು.
50 ಶೇರುಗಳು ನಿಫ್ಟಿಯೂ 196.60 ಅಂಕಗಳ ಚೇತರಿಕೆ ಕಂಡಿದ್ದು 4,093 ಅಂಕಗಳ ಗಡಿ ದಾಟಿದೆ.
ಲೋಹ ಸೂಚ್ಯಂಕವು ಅತಿ ಹೆಚ್ಚು ಲಾಭಗಳಿಸಿದ್ದು, 744.83 ಅಂಕಗಳಷ್ಟು ಏರಿಕೆ ಸಾಧಿಸಿದೆ. ಜಿಂದಾಲ್ ಸ್ಟೀಲ್, ಸೆಸಾ ಗೋವಾ, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯು ಸ್ಟೀಲ್‌ಗಳು ಮಂಗಳವಾರದ ವಹಿವಾಟಿನಲ್ಲಿ ಲಾಭ ಗಳಿಸಿದವು.
|