ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂಚ್ಯಂಕ: ಮತ್ತೆ 385 ಅಂಕಗಳ ಕುಸಿತ  Search similar articles
ಜಾಗತಿಕ ಮಂದ ಮಾರುಕಟ್ಟೆಯ ಪ್ರಚೋದನೆಯಿಂದ ಸ್ಥಿರಾಸ್ಥಿ ಹೂಡಿಕೆದಾರರಲ್ಲಿ ಉಂಟಾದ ಮಾರಾಟ ಭರಾಟೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಗುರುವಾರದ ಪ್ರಾರಂಭದ ವಹಿವಾಟಿನಲ್ಲಿ 385 ಅಂಕಗಳಷ್ಟು ಕುಸಿತ ಕಂಡಿದೆ.

ಕಳೆದ ವಹಿವಾಟಿನಂತ್ಯದಲ್ಲಿ 703 ಅಂಕಗಳಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್, ಇಂದು ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ 385.11 ಅಂಕಗಳಷ್ಟು ಇಳಿಕೆಗೊಳ್ಳುವ ಮೂಲಕ 13,279.51 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 114.90 ಅಂಕಗಳಷ್ಟು ಇಳಿಕೆಗೊಂಡಿದ್ದು, 3,978.45 ಅಂಕಗಳಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಮಂದ ಪ್ರವೃತ್ತಿಯು ಪ್ರಾದೇಶಿಕ ಶೇರುಪೇಟೆಯ ಕುಸಿತಕ್ಕೆ ಪ್ರಚೋದನೆ ನೀಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಅಲ್ಲದೆ, ಕಳೆದ ವಹಿವಾಟಿನಲ್ಲಿನ ಶೇರು ಪೇಟೆಯ ಸುಮಾರು 700 ಅಂಕಗಳ ಏರಿಕೆಯು ಕೇವಲ ತಾತ್ಕಾಲಿಕ ಎಂಬುದಾಗಿ ಮಾರುಕಟ್ಟೆ ಮೂಲಗಳು ಸ್ಪಷ್ಟಪಡಿಸಿವೆ.

ಎಚ್‌ಡಿಎಫ್‌ಸಿ ಲಿ., ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಟೆಕ್ನಾಲಜಿ, ಲಾರ್ಸನ್ ಆಂಡ್ ಟರ್ಬೋ, ಬಿಎಚ್ಇಎಲ್, ರಿಲಾಯನ್ಸ್ ಇಂಡಸ್ಟ್ರೀಸ್, ರಿಲಾಯನ್ಸ್ ಇನ್ಫ್ರಾ, ರಿಲಾಯನ್ಸ್ ಕಮ್ಯುನಿಕೇಶನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್ ಮತ್ತು ವಿಪ್ರೋ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗ ಪ್ರಮುಖ ಶೇರುಗಳಾಗಿವೆ.
ಮತ್ತಷ್ಟು
ಆಕಾಶ ಮುಖಿಯಾದ ಸೆನ್ಸೆಕ್ಸ್: 703 ಅಂಕಗಳ ಏರಿಕೆ
ಚೇತರಿಕೆಯ ಹಾದಿಯಲ್ಲಿ ಸ್ಟಾಕ್ ಎಕ್ಸ್‌ಚೇಂಜ್
500 ಅಂಕಗಳ ಗಣನೀಯ ಕುಸಿತ ಕಂಡ ಶೇರುಪೇಟೆ
ಸೆನ್ಸೆಕ್ಸ್: 71 ಅಂಕಗಳ ಕುಸಿತ
ಸೂಚ್ಯಂಕ: 341 ಅಂಕಗಳ ಇಳಿಕೆ
56 ಅಂಕಗಳ ಆರಂಭಿಕ ಕುಸಿತದಲ್ಲಿ ಶೇರುಪೇಟೆ