ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉರುಳಿದ ಶೇರುಪೇಟೆ: 570 ಅಂಕಗಳ ಕುಸಿತ  Search similar articles
PTI
ಶೇರುಗಳ ಮಾರಾಟ ಭರಾಟೆಯಿಂದಾಗಿ, ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 570 ಅಂಕಗಳ ಗಣನೀಯ ಕುಸಿತದೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿದ್ದು, ಈ ಮೂಲಕ ಬುಧವಾರದ ಶೇರುಪೇಟೆಯ ದಿಢೀರ್ ವರ್ಧನೆಯು ಕೇವಲ ತಾತ್ಕಾಲಿಕ ಎಂಬುದನ್ನು ಸಾಬೀತುಪಡಿಸಿದೆ.

ಕಳೆದ ಕೆಲವು ದಿನಗಳ ಸರಣಿ ಕುಸಿತಗಳ ನಂತರ, ನಿನ್ನೆ ವಹಿವಾಟಿನಂತ್ಯದಲ್ಲಿ ಶೇರುಪೇಟೆಯು ಸುಮಾರು 700 ಅಂಕಗಳ ಏರಿಕೆ ಕಂಡಿತ್ತು. ಆದರೆ, ಮೆಟಲ್, ಸ್ಥಿರಾಸ್ಥಿ, ಬ್ಯಾಂಕಿಂಗ್ ಕ್ಷೇತ್ರಗಳ ಶೇರುಗಳ ಇಳಿಕೆಯಿಂದಾಗಿ ಸುಮಾರು 570.51 ಅಂಕಗಳಷ್ಟು ಸೆನ್ಸೆಕ್ಸ್ ಕುಸಿಯುವ ಮೂಲಕ 13,094.11 ಅಂಕಗಳಿಗೆ ವಹಿವಾಟನ್ನು ಅಂತ್ಯದೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಶೇರುಪೇಟೆಯು ಕನಿಷ್ಟ ಇಂಡೆಕ್ಸ್ 12,934.92 ಆಗಿದ್ದು, ಗರಿಷ್ಟ ಅಂಕವು 13,530.68 ಆಗಿದೆ.

ಇದೇ ರೀತಿ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು ಕೂಡಾ 167.60 ಅಂಕಗಳಷ್ಟು ಇಳಿಕೆಗೊಂಡಿದ್ದು, 3,925.75 ಅಂಕಗಳಿಗೆ ತಲುಪಿದೆ.

ಬ್ಯಾರಲ್‌ಗೆ 145 ಡಾಲರ್‌ಗೆ ಏರಿದ ಕಚ್ಛಾತೈಲ ಬೆಲೆ ಮತ್ತು ದೇಶದ ರಾಜಕೀಯ ಅಸ್ಥಿರತೆಯ ಮುಂದುವರಿಕೆಯು ಹೂಡಿಕೆದಾರರ ಮನೋವೃತ್ತಿ ಮೇಲೆ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಇದರೊಂದಿಗೆ, ನಾಳೆ ಹೊರಬೀಳಲಿರುವ ಹಣದುಬ್ಬರ ಅಂಕಿಅಂಶದ ಮುಂದಾಗಿ, ಶೇರು ಖರೀದಿಗೆ ಹೂಡಿಕೆದಾರರು ಯಾವುದೇ ಆಸಕ್ತಿಯನ್ನು ತೋರುತ್ತಿರಲಿಲ್ಲ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಲಂಡನ್ ಮೆಟಲ್ ವಿನಿಮಯ ಕೇಂದ್ರದಲ್ಲಿ ಕಳೆದ ಸಂಜೆ ಬೆಲೆ ಇಳಿಕೆ ಉಂಟಾದ ನಂತರ, ಮೆಟಲ್ ಶೇರುಗಳ ಮೌಲ್ಯವು ಕುಸಿತಗೊಂಡಿದ್ದು, ಸ್ಟೀಲ್ ಉತ್ಪಾದಕರೊಂದಿಗಿನ ಸರಕಾರದ ಸಭೆಯ ಮುಂದಾಗಿಯೂ ಮಾರಾಟ ಭರಾಟೆ ಉಂಟಾಗಿತ್ತು.

ಇಂದಿನ ವಹಿವಾಟಿನಲ್ಲಿ ಸ್ಥಿರಾಸ್ಥಿ ಕ್ಷೇತ್ರವು ಎರಡನೇ ಅತಿ ಹೆಚ್ಚು ಕುಸಿತ ಕಂಡ ಶೇರಾಗಿದ್ದು, ಬ್ಯಾಂಕ್‌ಗಳ ಬಡ್ಡಿದರ ಏರಿಕೆಯು ಮತ್ತು ಗೃಹ ಸಾಲ ಬಡ್ಡಿದರ ಏರಿಕೆಯಿಂದ ಸ್ಥಿರಾಸ್ಥಿ ಆದಾಯದಲ್ಲಿನ ಇಳಿಕೆಯ ಭೀತಿಯು ಈ ಕುಸಿತಕ್ಕೆ ಪುಷ್ಠಿ ನೀಡಿದೆ.
ಮತ್ತಷ್ಟು
ಸೂಚ್ಯಂಕ: ಮತ್ತೆ 385 ಅಂಕಗಳ ಕುಸಿತ
ಆಕಾಶ ಮುಖಿಯಾದ ಸೆನ್ಸೆಕ್ಸ್: 703 ಅಂಕಗಳ ಏರಿಕೆ
ಚೇತರಿಕೆಯ ಹಾದಿಯಲ್ಲಿ ಸ್ಟಾಕ್ ಎಕ್ಸ್‌ಚೇಂಜ್
500 ಅಂಕಗಳ ಗಣನೀಯ ಕುಸಿತ ಕಂಡ ಶೇರುಪೇಟೆ
ಸೆನ್ಸೆಕ್ಸ್: 71 ಅಂಕಗಳ ಕುಸಿತ
ಸೂಚ್ಯಂಕ: 341 ಅಂಕಗಳ ಇಳಿಕೆ