ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆನ್ಸೆಕ್ಸ್:260 ಅಂಕಗಳ ವರ್ಧನೆ  Search similar articles
ಪ್ರಬಲ ಶೇರುಗಳ ಖರೀದಿ ಭರಾಟೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಸೋಮವಾರದ ಪ್ರಾರಂಭದ ವಹಿವಾಟಿನಲ್ಲಿ 260 ಅಂಕಗಳ ಏರಿಕೆ ಕಂಡಿದೆ.

ಕಳೆದ ವಹಿವಾಟಿನಂತ್ಯದಲ್ಲೂ ಸುಮಾರು 360 ಅಂಕಗಳಷ್ಟು ಏರಿದ್ದ ಸೆನ್ಸೆಕ್ಸ್, ಇಂದು ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ 259.80 ಅಂಕಗಳಷ್ಟು ಏರುವ ಮೂಲಕ 13,713.80 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 85.55 ಅಂಕಗಳಷ್ಟು ಏರಿಕೆಗೊಳ್ಳುವ ಮೂಲಕ 4,100ರ ಗಡಿಯನ್ನು ಮರುಗಳಿಸಿದೆ.

ರಾಜಕೀಯ ಬಿಕ್ಕಟ್ಟು ತಗ್ಗುವಿಕೆಯು ಮತ್ತು ಇತರ ಏಶಿಯನ್ ಶೇರು ಮಾರುಕಟ್ಟೆಯ ದೃಢ ಪ್ರವೃತ್ತಿಯು ಶೇರುಪೇಟೆ ವರ್ಧನೆಗೆ ಪುಷ್ಠಿ ನೀಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಈ ದಿನದ ವಹಿವಾಟಿನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್, ಲಾರ್ಸನ್ ಆಂಡ್ ಟರ್ಬೋ, ಬಿಎಚ್ಇಎಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಗ್ರಾಸಿಂ ಇಂಡಸ್ಟ್ಪೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಲಿ., ಇನ್ಫೋಸಿಸ್ ಟೆಕ್ನಾಲಜಿ, ಟಿಸಿಎಸ್, ವಿಪ್ರೋ, ಒಎನ್‌ಜಿಸಿ, ರಿಲಾಯನ್ಸ್ ಇನ್ಫ್ರಾ, ಡಿಎಲ್ಎಫ್ ಮತ್ತು ಎಸಿಸಿ ಶೇರುಗಳು ಏರುಮುಖದಲ್ಲಿವೆ.
ಮತ್ತಷ್ಟು
359 ಅಂಕಗಳಗೆ ಏರಿದ ಶೇರುಪೇಟೆ
104 ಅಂಕಗಳ ಚೇತರಿಕೆಯಲ್ಲಿ ಶೇರುಪೇಟೆ
ಉರುಳಿದ ಶೇರುಪೇಟೆ: 570 ಅಂಕಗಳ ಕುಸಿತ
ಸೂಚ್ಯಂಕ: ಮತ್ತೆ 385 ಅಂಕಗಳ ಕುಸಿತ
ಆಕಾಶ ಮುಖಿಯಾದ ಸೆನ್ಸೆಕ್ಸ್: 703 ಅಂಕಗಳ ಏರಿಕೆ
ಚೇತರಿಕೆಯ ಹಾದಿಯಲ್ಲಿ ಸ್ಟಾಕ್ ಎಕ್ಸ್‌ಚೇಂಜ್