ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
444 ಅಂಕಗಳಷ್ಟು ಕುಸಿದ ಸೆನ್ಸೆಕ್ಸ್  Search similar articles
ಇನ್ಫೋಸಿಸ್ ಟೆಕ್ನಾಲಜಿ, ರಿಲಾಯನ್ಸ್ ಇಂಡಸ್ಟ್ರೀಸ್ ಮುಂತಾದ ಪ್ರಬಲ ಶೇರುಗಳಲ್ಲಿನ ಮಾರಾಟ ಭರಾಟೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಮಂಗಳವಾರದ ಪ್ರಾರಂಭದ ವಹಿವಾಟಿನಲ್ಲಿ 444 ಅಂಕಗಳ ಇಳಿಕೆ ಕಂಡಿದೆ.

ಕಳೆದ ವಹಿವಾಟುಗಳಲ್ಲಿ ಸುಮಾರು 430 ಅಂಕಗಳಷ್ಟು ವರ್ಧಿಸಿದ್ದ ಶೇರುಪೇಟೆಯು, ಇಂದು ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ 443.95 ಅಂಕಗಳಷ್ಟು ಇಳಿಕೆಗೊಳ್ಳುವ ಮೂಲಕ 13.082.04 ಅಂಕಗಳಿಗೆ ತಲುಪಿದೆ.

ಅದೇ ರೀತಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 133.95 ಅಂಕಗಳಷ್ಟು ಇಳಿಕೆಗೊಂಡು 3.896.05 ಅಂಕಗಳಿಗೆ ತಲುಪುವ ಮೂಲಕ 3,900 ಗಡಿಗಿಂತ ಕೆಳಮಟ್ಟದಲ್ಲಿ ವಹಿವಾಟನ್ನು ಪ್ರಾರಂಭಿಸಿದೆ.

ಬೆಂಬಲ ಹಿಂತೆಗೆತದ ಕುರಿತಾಗಿ ಆಡಳಿತಾರೂಢ ಯುಪಿಎ ಸರಕಾರದೊಂದಿಗಿನ ಎಡಪಕ್ಷಗಳ ನಿರ್ಣಾಯಕ ಸಭೆಯ ಮುಂದಾಗಿ, ಶೇರುಪೇಟೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಅಲ್ಲದೆ, ಜಪಾನ್, ಹಾಂಗ್ ಕಾಂಗ್ ಮುಂತಾದ ಏಶಿಯನ್ ಶೇರು ಮಾರುಕಟ್ಟೆಗಳ ಮಂದ ಪ್ರವೃತ್ತಿಯು ಕೂಡಾ ಮಾರುಕಟ್ಟೆ ಕುಸಿತಕ್ಕೆ ಪುಷ್ಠಿ ನೀಡಿದೆ ಎಂದು ಮಾರುಕಟ್ಟೆಮೂಲಗಳು ತಿಳಿಸಿವೆ.

ರಿಲಾಯನ್ಸ್ ಇಂಡಸ್ಟ್ರೀಸ್, ರಿಲಾಯನ್ಸ್ ಕಮ್ಯುನಿಕೇಶನ್ಸ್, ರಿಲಾಯನ್ಸ್ ಇನ್ಫ್ರಾ, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಲಿ., ಎಚ್‌ಡಿಎಫ್‌ಸಿ ಬ್ಯಾಂಕ್, ಗ್ರಾಸಿಂ ಇಂಡಸ್ಟ್ಪೀಸ್, ಭಾರ್ಟಿ ಏರ್‌ಟೆಲ್, ಲಾರ್ಸನ್ ಆಂಡ್ ಟರ್ಬೋ, ಮಾರುತಿ, ಒಎನ್‌ಜಿಸಿ ಮತ್ತು ಟಾಟಾ ಸ್ಟೀಲ್ ಈ ದಿನದ ವಹಿವಾಟಿನಲ್ಲಿ ಕುಸಿತ ಕಂಡ ಶೇರುಗಳಾಗಿವೆ.
ಮತ್ತಷ್ಟು
ಸೆನ್ಸೆಕ್ಸ್:70 ಅಂಕಗಳ ಏರಿಕೆ
ಸೆನ್ಸೆಕ್ಸ್:260 ಅಂಕಗಳ ವರ್ಧನೆ
359 ಅಂಕಗಳಗೆ ಏರಿದ ಶೇರುಪೇಟೆ
104 ಅಂಕಗಳ ಚೇತರಿಕೆಯಲ್ಲಿ ಶೇರುಪೇಟೆ
ಉರುಳಿದ ಶೇರುಪೇಟೆ: 570 ಅಂಕಗಳ ಕುಸಿತ
ಸೂಚ್ಯಂಕ: ಮತ್ತೆ 385 ಅಂಕಗಳ ಕುಸಿತ