ಕೇಂದ್ರದಲ್ಲಿನ ರಾಜಕೀಯ ಅಸ್ಥಿರತೆಯು ಹೂಡಿಕೆದಾರರ ಪ್ರವೃತ್ತಿಯ ಮೇಲೆ ಪರಿಣಾಮ ಬೀರುವುದರೊಂದಿಗೆ, ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 170 ಅಂಕಗಳ ಕುಸಿತದೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.
ಕಳೆದ ವಹಿವಾಟುಗಳಲ್ಲಿ 430 ಅಂಕಗಳಷ್ಟು ಏರಿಕೆಗೊಂಡಿದ್ದ ಸೆನ್ಸೆಕ್ಸ್, 176.34 ಅಂಕಗಳಷ್ಟು ಇಳಿಕೆಗೊಳ್ಳುವ ಮೂಲಕ 13,345.65 ಅಂಕಗಳಿಗೆ ತಲುಪಿದೆ.
ಅಂತೆಯೇ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 41.45 ಅಂಕಗಳಷ್ಟು ಇಳಿಕೆಗೊಂಡಿದ್ದು, 3,988.55 ಅಂಕಗಳಿಗೆ ತಲುಪಿದೆ.
ಅಣು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರದಿಂದ ಎಡಪಕ್ಷಗಳು ಬೆಂಬಲವನ್ನು ಹಿಂತೆದುಕೊಂಡ ವರದಿಗಳ ಬೆನ್ನಲ್ಲೇ ಮಾರಾಟ ಪ್ರಕ್ರಿಯೆಯು ಚುರುಕುಗೊಂಡಿದ್ದು, ಶೇರುಪೇಟೆಯು ಮಂದ ಪ್ರವೃತ್ತಿಯ ಪ್ರತಿಕ್ರಿಯೆಯನ್ನು ನೀಡಿದೆ.
ಅಲ್ಲದೆ, ಮಂದ ಖರೀದಿ ಪ್ರಕ್ರಿಯೆಯಿಂದಾಗಿ ಪ್ರಬಲ ಶೇರುಗಳ ಮೌಲ್ಯದಲ್ಲಿ ಕೂಡಾ ಇಳಿಕೆ ಉಂಟಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
|