ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂಚ್ಯಂಕ: ಆರಂಭಿಕ ವಹಿವಾಟಿನಲ್ಲಿ 575 ಅಂಕಗಳ ಏರಿಕೆ  Search similar articles
ಸ್ಥಿರಾಸ್ಥಿ, ಇಂಧನ ಕ್ಷೇತ್ರಗಳಲ್ಲಿನ ಪ್ರಬಲ ಶೇರುಗಳಲ್ಲಿ ಉಂಟಾದ ಖರೀದಿ ಭರಾಟೆಯಿಂದಾಗಿ, ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಬುಧವಾರ 575 ಅಂಕಗಳ ಏರಿಕೆಯೊಂದಿಗೆ ತನ್ನ ವಹಿವಾಟನ್ನು ಪ್ರಾರಂಭಿಸಿದೆ.

ಕಳೆದ ವಹಿವಾಟಿನಂತ್ಯದಲ್ಲಿ 176.34 ಅಂಕಗಳಷ್ಟು ಕುಸಿತ ಕಂಡಿದ್ದ ಸೆನ್ಸೆಕ್ಸ್, ಇಂದು ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ 575.52 ಅಂಕಗಳಷ್ಟು ಏರಿಕೆಗೊಳ್ಳುವ ಮೂಲಕ 13,925.17 ಅಂಕಗಳಿಗೆ ತಲುಪಿದೆ.

ಅಂತೆಯೇ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು ಕೂಡಾ 133.80ರಷ್ಟು ಏರಿಕೆಗೊಂಡು 4,122.35 ಅಂಕಗಳಿಗೆ ತಲುಪುವ ಮೂಲಕ 4,100ರ ಗಡಿಯನ್ನು ಮರುಗಳಿಸಿದೆ.

ಜಾಗತಿಕ ಶೇರುಮಾರುಕಟ್ಟೆಯಲ್ಲಿನ ದೃಢತೆಯು ಮಾರುಕಟ್ಟೆಯ ಪ್ರವೃತ್ತಿಗೆ ಪ್ರಚೋದನೆ ನೀಡಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ರಿಲಾಯನ್ಸ್ ಇಂಡಸ್ಟ್ರೀಸ್, ರಿಲಾಯನ್ಸ್ ಇನ್ಫ್ರಾ, ರಿಲಾಯನ್ಸ್ ಕಮ್ಯುನಿಕೇಶನ್ಸ್, ಒಎನ್‌ಜಿಸಿ, ಲಾರ್ಸನ್ ಆಂಡ್ ಟರ್ಬೋ, ಬಿಎಚ್ಇಎಲ್, ಗ್ರಾಸಿಂ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್ ಟೆಕ್ನಾಲಜಿ, ಟಿಸಿಎಸ್ ಮತ್ತು ಮಾರುತಿ ಈ ದಿನದ ವಹಿವಾಟಿನಲ್ಲಿ ಪ್ರಗತಿಯಲ್ಲಿರುವ ಶೇರುಗಳಾಗಿವೆ.
ಮತ್ತಷ್ಟು
ಕೇಂದ್ರದಲ್ಲಿ ಅಸ್ಥಿರತೆ: ಕುಸಿದ ಶೇರುಪೇಟೆ
444 ಅಂಕಗಳಷ್ಟು ಕುಸಿದ ಸೆನ್ಸೆಕ್ಸ್
ಸೆನ್ಸೆಕ್ಸ್:70 ಅಂಕಗಳ ಏರಿಕೆ
ಸೆನ್ಸೆಕ್ಸ್:260 ಅಂಕಗಳ ವರ್ಧನೆ
359 ಅಂಕಗಳಗೆ ಏರಿದ ಶೇರುಪೇಟೆ
104 ಅಂಕಗಳ ಚೇತರಿಕೆಯಲ್ಲಿ ಶೇರುಪೇಟೆ