ಮಾರುಕಟ್ಟೆ ದರ | ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸತತ ಐದನೇ ವಾರದಲ್ಲೂ ಮಾರುಕಟ್ಟೆ ಏರುಗತಿ (Sensex | Mumbai Market | bse | Nifty)
ವಿದೇಶಿ ಹೂಡಿಕೆದಾರರ ಬೆಂಬಲದೊಂದಿಗೆ ಶುಕ್ರವಾರದ ವಹಿವಾಟಿನಲ್ಲಿ ಏರಿಕೆ ಕಂಡಿರುವ ಮುಂಬೈನ ಬಿಎಸ್‌ಇ ಸೂಚ್ಯಂಕವು ಸತತ ಐದನೇ ವಾರದಲ್ಲೂ ಏರುಗತಿಯನ್ನು ಸಾಧಿಸಿದೆ.

ಶುಕ್ರವಾರದ ವಹಿವಾಟಿನಲ್ಲಿ ಶೇಕಡಾ 0.99 ಅಥವಾ 173.11 ಪಾಯಿಂಟ್ ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 17604.96 ಅಂಶಗಳಿಗೆ ತಲುಪಿದೆ. ಆ ಮೂಲಕ ಸತತ ಐದನೇ ವಾರದಲ್ಲೂ ಪ್ರಗತಿಯನ್ನು ಕಂಡಿವೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ ಶೇಕಡಾ 1.06ರಷ್ಟು ಅಥವಾ 55.95 ಪಾಯಿಂಟ್ ಏರಿಕೆ ಕಂಡು 5,325.85 ಅಂಶಗಳಿಗೆ ತಲುಪಿದೆ.

ಒಟ್ಟಾರೆಯಾಗಿ ಶೇರು ಸೂಚ್ಯಂಕವು ವಾರಂತ್ಯದಲ್ಲಿ ಶೇಕಡಾ 21.5ರಷ್ಟು ಏರಿಕೆಯನ್ನು ಕಂಡಿದ್ದು, ಬಹುತೇಕ ಎಲ್ಲ ಶೇರುಗಳು ಮುನ್ನಡೆಯನ್ನು ಪಡೆದುಕೊಂಡಿದೆ.
ಇವನ್ನೂ ಓದಿ
WebduniaWebdunia