ಮುಖ್ಯ ಪುಟ ಸುದ್ದಿ ಜಗತ್ತು » ಚುನಾವಣೆ (Election)
ಮತಸಮರ
ಮತಸಮರ
ಎಚ್‌ಡಿಕೆ, ಕಟೀಲ್, ಧರಂ ಸೇರಿ 9 ಕ್ರಿಮಿನಲ್‌‌ ಸಂಸದರು‍!


ಬೆಂಗಳೂರು: ಸಂಸತ್‌ಗೆ ಕೋಟ್ಯಾಧಿಪತಿಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರವೇಶ ಪಡೆಯುವ ಸಂಪ್ರದಾಯ ಈ ಬಾರಿಯೂ ಮುಂದುವರಿದಿದ್ದು, ರಾಜ್ಯದಿಂದ ಕ್ರಿಮಿನಲ್ ಹಿನ್ನೆಲೆಯುಳ್ಳ 9ಮಂದಿ ಸಂಸದರು ಆಯ್ಕೆಯಾಗಿದ್ದು, ಈ ಪೈಕಿ ಆರು ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಜೆಡಿಎಸ್‌ನಿಂದ ಇಬ್ಬರು ಹಾಗೂ ಕಾಂಗ್ರೆಸ್‌ನಿಂದ ಒಬ್ಬರು ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ನ್ಯಾಷನಲ್ ಎಲೆಕ್ಷನ್ ವಾಚ್ ಪ್ರಕಟಣೆಯಲ್ಲಿ ತಿಳಿಸಿದೆ.