ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿ ವಿವಾದಕ್ಕೆ ಕಾರಣವಾಗಿದ್ದ ತೀರ್ಥಹಳ್ಳಿಯ ಸಹನಾ ಮತ್ತು ತೌಫಿಕ್ ವಿವಾಹ ಪ್ರಕರಣ ಕೊನೆಗೂ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿದೆ.
ಸೋಮವಾರ ಸಹನಾ ಮತ್ತು ತೌಫಿಕ್ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಹಾಜರಾಗಿದ್ದರು. ತಾನು ರಾಯಚೂರಿನಲ್ಲಿ ತೌಫಿಕ್ ಜತೆ ವಿವಾಹವಾಗಿದ್ದು, ನನ್ನಿಚ್ಛೆಯಂತೆಯೇ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ನ್ಯಾಯಾಧೀಶರಿಗೆ ಸಹನಾ ಸ್ಪಷ್ಟನೆ ನೀಡಿದ್ದಳು.