ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ  Search similar articles
PTI
ಕಳೆದ 29 ವರ್ಷಗಳಲ್ಲಿ ಇದುವರೆಗೆ 8 ಬಾರಿ ವಿಶ್ವಾಸಮತ ಕೋರಲಾಗಿದ್ದು, ಅವುಗಳಲ್ಲಿ 6 ಸಂದರ್ಭಗಳಲ್ಲಿ ಸರಕಾರವು ಉಳಿದುಕೊಂಡಿತ್ತು ಮತ್ತು ಎರಡು ಬಾರಿ ಅಂದಿನ ಪ್ರಧಾನಿಗಳು ಬಲಾಬಲ ಪರೀಕ್ಷೆ ನಡೆಯುವ ಮುನ್ನವೇ ರಾಜೀನಾಮೆ ನೀಡಿದ್ದರು.

ವಿಶೇಷವೆಂದರೆ, ವಿಶ್ವಾಸಮತದ ಪರಿಕಲ್ಪನೆ ಬೆಳೆದು ಬಂದಿದ್ದು 1979ರಲ್ಲಿ. ಯಾಕೆಂದರೆ ಅದಕ್ಕಿಂತ ಹಿಂದಿನ ಅಂದರೆ 1952ರಿಂದ 1977ರವರೆಗಿನ ಎಲ್ಲಾ ಮಹಾ ಚುನಾವಣೆಗಳಲ್ಲಿ ಮತದಾರರ ತೀರ್ಪು ಸ್ಪಷ್ಟವಾಗಿತ್ತು ಮತ್ತು ನಿರ್ಣಾಯಕವಾಗಿಯೇ ಮೂಡಿಬರುತ್ತಿತ್ತು.

ಲೋಕಸಭೆಯ ಈಗಿನ ಬಲ
  ಲೋಕಸಭೆಯ ಬಲ 545. ಇವರಲ್ಲಿ 543 ಮಂದಿ ಚುನಾಯಿತರು ಮತ್ತು ಇಬ್ಬರು ಆಂಗ್ಲೋ ಇಂಡಿಯನ್ ನಾಮನಿರ್ದೇಶಿತರು. ಸದ್ಯಕ್ಕೆ 2 ಸ್ಥಾನ ಖಾಲಿಬಿದ್ದಿವೆ. ಒಬ್ಬ ಸದಸ್ಯ, ಕೇರಳ ಕಾಂಗ್ರೆಸ್‌ನ ಪಿ.ಸಿ.ಥೋಮಸ್‌ಗೆ ಹೈಕೋರ್ಟ್ ಆದೇಶಾನುಸಾರ ಮತದಾನ ಇಲ್ಲ. ಹೀಗಾಗಿ ಸದ್ಯದ ಸದಸ್ಯ ಬಲ 542. ಬಹುಮತಕ್ಕೆ ಬೇಕಾಗಿದ್ದು 272.      
1979ರಲ್ಲಿ ಚೌಧುರಿ ಚರಣ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ವಿಶ್ವಾಸ ಮತದ ಅವಶ್ಯಕತೆ ಬಂತು. ಇದಕ್ಕೆ ಕಾರಣ ಜನತಾ ಪಕ್ಷದಲ್ಲಿನ ಒಡಕು. ತನ್ನ ಬಳಿ ಸಾಕಷ್ಟು ಸಂಖ್ಯಾಬಲವಿಲ್ಲ ಎಂಬುದು ಅರಿವಾದ ಹಿನ್ನೆಲೆಯಲ್ಲಿ, ಚರಣ್ ಸಿಂಗ್ ಅವರು ಸದನಕ್ಕೆ ಬಾರದೆಯೇ ರಾಜೀನಾಮೆ ನೀಡಿದ್ದರು.

ಮುಂದಿನ ವಿಶ್ವಾಸಮತ ಗೊತ್ತುವಳಿ ಮಂಡನೆಯಾದದ್ದು ಒಂದು ದಶಕದ ನಂತರ. ಅಂದರೆ ವಿಶ್ವನಾಥ್ ಪ್ರತಾಪ್ ಸಿಂಗ್ ಕಾಲದಲ್ಲಿ. 1989ರ ಡಿಸೆಂಬರ್ ತಿಂಗಳಲ್ಲಿ ಅವರು ವಿಶ್ವಾಸಮತದಲ್ಲಿ ಗೆದ್ದರೂ, ಒಂದು ವರ್ಷದ ನಂತರ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲನುಭವಿಸಿ ರಾಜೀನಾಮೆ ನೀಡಿದರು.

ವಿ.ಪಿ.ಸಿಂಗ್ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಚಂದ್ರಶೇಖರ್ 1990ರಲ್ಲಿ ವಿಶ್ವಾಸ ಮತ ಗೆದ್ದುಕೊಂಡರು. ಆದರೆ ಸರಕಾರಕ್ಕೆ ನೀಡುತ್ತಿದ್ದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡ ಬಳಿಕ ಐದು ತಿಂಗಳಲ್ಲೇ ಪದತ್ಯಾಗ ಮಾಡಿದರು.

1991ರಲ್ಲಿ ಪಿ.ವಿ.ನರಸಿಂಹ ರಾವ್ ಅವರ ಸರಕಾರವು ಜೆಎಂಎಂ ಲಂಚ ಹಗರಣದ ಕರಾಳ ಅಧ್ಯಾಯದೊಡನೆ ವಿಶ್ವಾಸ ಮತ ಗೆದ್ದುಕೊಂಡಿತು ಮತ್ತು ಅವರ ಸರಕಾರ ಪೂರ್ಣಾವಧಿ ಪೂರೈಸಿತು.

ಪ್ರಧಾನಿಗಿಲ್ಲ ಮತದಾನ
  ಈ ಬಾರಿಯ ವಿಶ್ವಾಸಮತದ ವಿಶೇಷತೆಯೆಂದರೆ, ಸ್ವತಃ ಪ್ರಧಾನಿ ಅವರು ತಮ್ಮ ವಿಶ್ವಾಸಮತ ಗೊತ್ತುವಳಿಗೆ ಮತ ಚಲಾಯಿಸುವುದಿಲ್ಲ. ಯಾಕೆಂದರೆ ಅವರು ರಾಜ್ಯಸಭಾ ಸದಸ್ಯ.      
ನಂತರ 1997ರಲ್ಲಿ ಎಚ್.ಡಿ.ದೇವೇಗೌಡ ಅವರು ವಿಶ್ವಾಸ ಮತ ಗೆದ್ದುಕೊಂಡರು, ಆದರೆ 1997ರ ಏಪ್ರಿಲ್ ತಿಂಗಳಲ್ಲಿ ಅವರ ಸರಕಾರಕ್ಕೆ ಕಾಂಗ್ರೆಸ್ ಪಕ್ಷ ನೀಡುತ್ತಿದ್ದ ಬೆಂಬಲ ಹಿಂತೆಗೆದುಕೊಂಡಾಗ, ಸೋತು ಪದತ್ಯಾಗ ಮಾಡಿದರು.

ಗೌಡರ ಉತ್ತರಾಧಿಕಾರಿಯಾಗಿ ಬಂದ ಇಂದ್ರ ಕುಮಾರ್ ಗುಜ್ರಾಲ್ ಅವರು ಅದೇ ತಿಂಗಳು ವಿಶ್ವಾಸಮತ ಗೆದ್ದುಕೊಂಡರು. ಆದರೆ ನವೆಂಬರ್ ತಿಂಗಳಲ್ಲಿ ಬಹುಮತ ಕಳೆದುಕೊಂಡ ಕಾರಣ ಪದತ್ಯಾಗ ಮಾಡಬೇಕಾಯಿತು.

1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮಲ್ಲಿ ಸಾಕಷ್ಟು ಸಂಖ್ಯಾಬಲವಿಲ್ಲ ಎಂಬುದನ್ನು ಅರಿತುಕೊಂಡು, ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವ ಮುನ್ನವೇ ರಾಜೀನಾಮೆ ನೀಡಿದರು. ಆದರೆ 1998ರಲ್ಲಿ ಅವರು ವಿಶ್ವಾಸ ಮತ ಗೆದ್ದುಕೊಂಡರು.

2004ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಎಡಪಕ್ಷಗಳ ಸಮರ್ಥ ಬಾಹ್ಯ ಬೆಂಬಲ ದೊರೆತ ಹಿನ್ನೆಲೆಯಲ್ಲಿ ವಿಶ್ವಾಸ ಮತ ಕೋರಬೇಕಾಗಿ ಬರಲಿಲ್ಲ. ಇದೀಗ ಇದೇ ಎಡಪಕ್ಷಗಳು 50 ತಿಂಗಳ ಅಧಿಕಾರದ ಬಳಿಕ ಬೆಂಬಲ ಹಿಂತೆಗೆದುಕೊಂಡ ಪರಿಣಾಮವಾಗಿ ಅವರೀಗ ವಿಶ್ವಾಸಮತ ಕೋರಿ ಗೊತ್ತುವಳಿಯನ್ನು ಸದನದಲ್ಲಿ ಮಂಡಿಸಿದ್ದಾರೆ.

ಈ ಬಾರಿಯ ವಿಶ್ವಾಸಮತದ ವಿಶೇಷತೆಯೆಂದರೆ, ಸ್ವತಃ ಪ್ರಧಾನಿ ಅವರು ತಮ್ಮ ವಿಶ್ವಾಸಮತ ಗೊತ್ತುವಳಿಗೆ ಮತ ಚಲಾಯಿಸುವುದಿಲ್ಲ. ಯಾಕೆಂದರೆ ಅವರು ರಾಜ್ಯಸಭಾ ಸದಸ್ಯ. ಸರಕಾರದ ಉಳಿವಿಗೆ ಬೇಕಾದ ಮತಗಳ ಮ್ಯಾಜಿಕ್ ಸಂಖ್ಯೆಯನ್ನು 272 ಎಂದು ಲೆಕ್ಕ ಹಾಕಲಾಗುತ್ತಿದ್ದರೂ, ಮಂಗಳವಾರ ಮತ ಚಲಾವಣೆ ವೇಳೆ ಹಾಜರಿರುವ ಸಂಸದರ ಒಟ್ಟು ಸಂಖ್ಯೆಯ ಆಧಾರದಲ್ಲಿ ಅದು ಕಡಿಮೆಯಾಗುವ ಸಾಧ್ಯತೆಗಳೂ ಇವೆ.

ಲೋಕಸಭೆಯ ಬಲ 545. 543 ಮಂದಿ ಚುನಾಯಿತ ಸದಸ್ಯರಿರುತ್ತಾರೆ ಮತ್ತು ಇಬ್ಬರು ಆಂಗ್ಲೋ ಇಂಡಿಯನ್ ಸಮುದಾಯದ ನಾಮನಿರ್ದೇಶಿತ ಸದಸ್ಯರಿದ್ದಾರೆ. ಸದ್ಯಕ್ಕೆ ಎರಡು ಸ್ಥಾನಗಳು ಖಾಲಿಬಿದ್ದಿವೆ. ಒಬ್ಬ ಸದಸ್ಯ, ಕೇರಳ ಕಾಂಗ್ರೆಸ್‌ನ ಪಿ.ಸಿ.ಥೋಮಸ್ ಅವರನ್ನು ಮತದಾನದಿಂದ ನಿರ್ಬಂಧಿಸಲಾಗಿದೆ. ಆದರೆ ಅವರು ಚರ್ಚೆಯಲ್ಲಿ ಭಾಗವಹಿಸಬಹುದು. ಇದಕ್ಕೆ ಕಾರಣವೆಂದರೆ, ಅವರ ವಿರುದ್ಧ ಸಲ್ಲಿಸಲಾಗಿದ್ದ ಚುನಾವಣೆಗೆ ಸಂಬಂಧಿಸಿದ ಅರ್ಜಿಯೊಂದರಲ್ಲಿ ಕೇರಳ ಹೈಕೋರ್ಟ್ ನೀಡಿದ ನಿರ್ದೇಶನ.

ಹೀಗಾಗಿ ಸದ್ಯದ ಸದಸ್ಯ ಬಲ 542. ಬಹುಮತಕ್ಕೆ ಬೇಕಾದ ಸಂಖ್ಯೆ 272. ಇದರಲ್ಲಿ ಒಂದು ಮತ ಸ್ಪೀಕರ್ ಅವರದು. ಉಭಯ ಬಣಗಳ ಬಲಾಬಲ 'ಟೈ' ಆದಲ್ಲಿ ಅವರು ತಮ್ಮ ಮತ ಚಲಾಯಿಸುತ್ತಾರೆ.
ಮತ್ತಷ್ಟು
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!
ನೀವು ಪ್ರಧಾನಿಯಾದರೆ?....
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ