ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ನಯೀದುನಿಯಾ 'ಬಿಹಾರ ಪ್ರವಾಹ ಪರಿಹಾರ ನಿಧಿ'
PTI
ವಿಪತ್ತು ಮತ್ತು ವಿಧ್ವಂಸಗಳು ಎದುರಾದಾಗ ಮಾನವೀಯತೆ ಎಂದಿಗೂ ಅಳಿಯದು ಎಂಬುದು ವಾಸ್ತವ. ಅದು ಭೂಕಂಪವಿರಲಿ, ಚಂಡಮಾರುತವಿರಲಿ ಅಥವಾ ಭಾರೀ ಮಳೆಯಿಂದ ಸಂಭವಿಸಿದ ಪ್ರಕೃತಿವಿಕೋಪವಿರಲಿ, ವ್ಯಕ್ತಿಯ ಆಂತರ್ಯವು ಇಂತಹ ವಿಧ್ವಂಸಕ ಸನ್ನಿವೇಶಗಳನ್ನು ಎದುರಿಸಲು ಆತನಿಗೆ ಶಕ್ತಿ ಮತ್ತು ಧೈರ್ಯ ನೀಡುತ್ತದೆ. ಪರಸ್ಪರ ಸಹಾಯ ಮತ್ತು ಮಾನವೀಯ ಬೆಂಬಲವು ವಿಕೋಪಗಳ ನಂತರದ ಪರಿಸ್ಥಿತಿಯ ಎದುರಿಸುವುದನ್ನು ಸುಲಭವಾಗಿಸುತ್ತದೆ.

ಇದೀಗ ಮತ್ತೊಮ್ಮೆ ವಿಧ್ವಂಸಕಾರಿ ನೈಸರ್ಗಿಕ ವಿಕೋಪವು ರಾಷ್ಟ್ರವನ್ನು ಅಪ್ಪಳಿಸಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ.

ಪ್ರವಾಹದ ಬಲಿಪಶುಗಳಲ್ಲಿ ಹೆಚ್ಚಿನವರು ಮಕ್ಕಳು. ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ಇಂತಹವರಿಗೆ ಸಹಾಯದ ಅಗತ್ಯವಿದೆ. ನಾವ್ಯಾಕೆ ಇವರ ಶೋಕವನ್ನು ಹಂಚಿಕೊಳ್ಳಬಾರದು? ಬನ್ನಿ, ಇಂತಹ ಜೀವಗಳಿಗೆ ನಮ್ಮ ನೆರವಿನ ಹಸ್ತ ಚಾಚೋಣ. ಅವರ ಕಣ್ಣೀರನ್ನು ತೊಡೆಯಲು ನಮ್ಮ ಸೇವೆ ನೀಡೋಣ.

ಬಿಹಾರದ ಜನತೆಗೆ ನೀವೂ ಸಹಾಯ ಮಾಡಬಹುದು. 'ನಯೀದುನಿಯಾದ ಪ್ರವಾಹ ಪರಿಹಾರ ನಿಧಿ'ಗೆ ನೀವು ದೇಣಿಗೆ ನೀಡಬಹುದು. ನಯೀದುನಿಯಾವು ವೆಬ್‌ದುನಿಯಾದ ಮಾತೃ ಸಂಸ್ಥೆಯಾಗಿದ್ದು, ವೆಬ್‌ದುನಿಯಾ ಮ‌ೂಲಕವೂ ನೀವು ನಿಮ್ಮ ಕೊಡುಗೆಯನ್ನು ನೀಡಬಹುದು. ಬಿಹಾರ ಪ್ರವಾಹ ಸಂತ್ರಸ್ತರಿಗೆ ನೀವು ಸಹಾಯ ನೀಡಲಿಚ್ಛಿಸಿದರೆ ದಯವಿಟ್ಟು ಮುಕ್ತವಾಗಿ ದೇಣಿಗೆ ನೀಡಿರಿ. ನಿಮ್ಮ ಈ ದೇಣಿಗೆಯು ಆದಾಯ ತೆರಿಗೆಯ ಸೆಕ್ಷನ್ 80(ಜಿ)ಯಡಿ ಸಂಪೂರ್ಣ ವಿನಾಯಿತಿ ಹೊಂದಿದೆ.

ನಯೀದುನಿಯಾ ಆಡಳಿತ ಮತ್ತು ಸಿಬ್ಬಂದಿ ವರ್ಗವು ಈ ನಿಧಿಗೆ ಸುಮಾರು ಐದು ಲಕ್ಷ ರೂಪಾಯಿ ದೇಣಿಗೆ ನೀಡಿದೆ. ಈ ಪರಿಹಾರ ನಿಧಿಗೆ ನಿಮ್ಮ ಕೊಡುಗೆ ನೀಡುವ ಮೂಲಕ ನೀವು ನಿಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಿದಂತಾಗುತ್ತದೆ.

"Naidunia Baadh Rahat Kosh" ಪರವಾಗಿ ಈ ಕೆಳಗಿನ ವಿಳಾಸಕ್ಕೆ ಕ್ರಾಸ್ ಮಾಡಿದ ಚೆಕ್ ಕಳುಹಿಸಿ.

Naidunia Bihar relief fund
60/1, Labhchand Chajjlani Marg,
Indore,
(Madhya Pradesh).

ನಿಮಗೇನಾದರೂ ಸಂದೇಹಗಳಿದ್ದರೆ 'Bihar Flood Relief' ಸಬ್ಜೆಕ್ಟ್ ಲೈನ್‌ನೊಂದಿಗೆ [email protected] ವಿಳಾಸಕ್ಕೆ ಮೇಲ್ ಮಾಡಿ. ದಯವಿಟ್ಟು ಸಹಾಯ ಹಸ್ತ ಚಾಚಿ.
ಮತ್ತಷ್ಟು
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?