ಚಾರ್ಜ್ ಶೀಟ್‌ಗೆ ಒಳಪಟ್ಟ ಅಧಿಕಾರಿಯೊಬ್ಬರು ಒಂದರ ಮೇಲೊಂದರಂತೆ ಹುದ್ದೆ ಮೇಲೇರುತ್ತಾ, ದೇಶದ ಅತ್ಯುನ್ನತ ಕೇಂದ್ರ ವಿಚಕ್ಷಣಾ ದಳ ಅಥವಾ ಕೇಂದ್ರ ಜಾಗೃತ ದಳ ಎಂದು ಕರೆಯಲಾಗುವ ಸಿವಿಸಿಗೆ ಮುಖ್ಯಸ್ಥರಾಗಿರುವುದರ ಹಿಂದಿನ ನಿಗೂಢತೆಯಾದರೂ ಏನು? ಎಲ್ಲ ಪ್ರಶ್ನೆಗಳಿಗೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರಕಾರವು ಮತದಾರರಿಗೆ ಉತ್ತರದಾಯಿಯಾಗಿದೆ. ಸಚ್ಚಾರಿತ್ರ್ಯನಂತ, ಶುದ್ಧ ಹಸ್ತ ಎಂದೆಲ್ಲಾ ಕರೆಸಿಕೊಂಡಿರುವ ಪ್ರಧಾನಿ ಬಗೆಗೇ ಸಂದೇಹ ಮೂಡತೊಡಗಿದೆ. ಪ್ರಧಾನಿಯವರೇ ಥಾಮಸ್ ನೇಮಕ ಮಾಡಿದ್ದರಿಂದ ಅವರು ಇವುಗಳಿಗೆ ಉತ್ತರ ನೀಡಲೇಬೇಕಾಗಿದೆ. | CVC, PJ Thomas Appointment, Supreme Court, Manmohan Singh, UPA, Scam, Chidambaram, Sushma Swaraj