ಯಡಿಯೂರಪ್ಪ 'ಜೈಲು ಯಾತ್ರೆ'ಯೂ, ಮಾಧ್ಯಮಗಳ ಕರ್ತವ್ಯ ಪ್ರಜ್ಞೆಯೂ!

Widgets Magazine

ಅವಿನಾಶ್ ಬಿ.
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ, ಆಕೆಯನ್ನು ಅವರ ಸಿಖ್ ಸಮುದಾಯದ ಅಂಗರಕ್ಷಕ ಗುಂಡಿಟ್ಟು ಕೊಂದನೆಂಬ ಏಕೈಕ ಕಾರಣಕ್ಕೆ ಸಾವಿರಾರು ನಿಷ್ಪಾಪಿ ಸಿಖ್ಖರನ್ನು ಕೊಚ್ಚಿ ನರಮೇಧ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು - "ಹೆಮ್ಮರವೊಂದು ಉರುಳಿ ಬಿದ್ದಾಗ, ಭೂಮಿಯೇ ಅದುರುವುದು ಸಹಜ"! ಇದು ನೆನಪಾಗಿದ್ದು, ಜನಸಂಘದ ಕಾಲದಿಂದಲೂ ಪಕ್ಷ ಕಟ್ಟುತ್ತಾ, ಇಬ್ಬರೇ ಶಾಸಕರಿದ್ದ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರದ ಪಟ್ಟಕ್ಕೇರಿಸಿ, ಇದೀಗ 'ಮಹಾ ಪತನ'ಗೊಂಡ ಬೂಕನಕೆರೆ ಸಿದ್ದಲಿಂಗಪ್ಪ ಎಂಬ ಹೋರಾಟಗಾರ ಪರಪ್ಪನ ಅಗ್ರಹಾರದ ಜೈಲಿನೊಳಗೆ ಹೋದಾಗ. ಇದು ರಾಜ್ಯದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂಬುದರಲ್ಲಿಯೂ ಎರಡು ಮಾತಿಲ್ಲ ಅಂತ ಮೊದಲೇ ಹೇಳಿಬಿಡುತ್ತೇನೆ.

WD
ಹೋರಾಟಗಾರ ಎಂಬ ಪದಕ್ಕೆ ಕೆಲವರ ಆಕ್ಷೇಪವಿರಬಹುದು. ಆದರೆ, 1975ರಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ 45 ದಿನಗಳ ಕಾಲ ಹುಬ್ಬಳ್ಳಿ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹಗಳಲ್ಲಿ ಕಳೆದಿದ್ದ ಯಡಿಯೂರಪ್ಪ ಅವರಿಗೆ ಜೈಲು ಎಂಬುದು ತೀರಾ ಅರಿಯದ ಸಂಗತಿಯೇನಲ್ಲವಾದರೂ, ಈಗ ಜೈಲು ಪಾಲಾಗಿರುವುದು ತಮ್ಮ ಪುತ್ರವ್ಯಾಮೋಹದಿಂದಾಗಿ ಜಮೀನನ್ನು ಡೀನೋಟಿಫೈ ಮಾಡಿ, ತಮ್ಮ ಮಕ್ಕಳಿಗೆ ಅದೇ ಜಮೀನನ್ನು ಕಡಿಮೆ ದುಡ್ಡಿಗೆ ಕೊಡಿಸಿದರು ಎಂಬ ಆರೋಪಕ್ಕೆ ಸಂಬಂಧಿಸಿದ ಖಾಸಗಿ ಕೇಸುಗಳ ರಾಶಿಯಿಂದಾಗಿ. ಅವರು ಪೊಲೀಸರ ಬಂಧನಕ್ಕೆ ಸಿಲುಕದೆ, ತಾವಾಗಿಯೇ ಶರಣಾಗತರಾಗಿ, ಬಿಜೆಪಿ ಮತ್ತು ತಮ್ಮ ಮಾನ ಉಳಿಸಲು ನೋಡಿದ್ದಾರೆ. ಆದರೆ, ಕೋರ್ಟಿನಿಂದ ಜೈಲು, ಜೈಲಿನಿಂದ ಆಸ್ಪತ್ರೆ ಮತ್ತು ಮರಳಿ ಜೈಲಿಗೆ ಹೋದ ಈ ಘಟನಾವಳಿಗಳನ್ನು ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದಾಗ, ಮತ್ತು ವೆಬ್‌ದುನಿಯಾ ಓದುಗರು ಕೆಲವರು ಸುದ್ದಿಗಳಲ್ಲಿ ದಾಖಲಿಸಿದ ಕಾಮೆಂಟುಗಳನ್ನು ನೋಡಿದಾಗ ಈ ಬಗ್ಗೆ ಬರೆಯಲೇಬೇಕೆನಿಸಿತು.

ಒಂದು ಕಾಲವಿತ್ತು. 'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು' ಅಂತ ಸ್ವತಃ ವಿರೋಧ ಪಕ್ಷಗಳವರೂ ಒಪ್ಪುತ್ತಿದ್ದ ಕಾಲವದು. ಇನ್ನು ಇಪ್ಪತ್ತು ವರ್ಷ ಈ ಯಡಿಯೂರಪ್ಪನೇ ಸರ್ಕಾರ ನಡೆಸುತ್ತಾನೆ ಅಂತ ಅವರೇ ಹಲವು ಸಭೆ ಸಮಾರಂಭಗಳಲ್ಲಿ ಆತ್ಮವಿಶ್ವಾಸದಿಂದ ಹೇಳಿಕೊಂಡದ್ದಿದೆ ಮತ್ತು ಪ್ರತಿ ಉಪ ಚುನಾವಣೆಗಳಲ್ಲಿಯೂ ಅವರು ಬಿಜೆಪಿಗೆ ವಿಜಯ ದೊರಕಿಸಿಕೊಡುವ ಮೂಲಕ ಅದನ್ನು ಸಾಧಿಸಲು ಹೊರಟಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಬಹುಶಃ ಇದುವೇ ಎಡವಟ್ಟಾಗಿರುವುದು.

ಆದರೆ, ನಾಲ್ಕನೇ ಆಧಾರಸ್ಥಂಭವಾದ ಸುದ್ದಿ ಮಾಧ್ಯಮದ ನಡೆ ಎತ್ತ...?
ಇಷ್ಟು ಹೇಳಿ, ಒಂದು ಪ್ರಜಾಪ್ರಭುತ್ವದ ಅಳಿವು ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದೊಂದಿಗೆ ಮಾಧ್ಯಮರಂಗವೂ ನಾಲ್ಕನೇ ಸ್ತಂಭವಾಗಿದೆ ಎಂಬ ಚರ್ವಿತ ಚರ್ವಣ ಮಾತನ್ನು ಈಗಲೂ ಕೇಳುತ್ತಿದ್ದೇವೆ. ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ಭ್ರಷ್ಟತೆಯ ಬಣ್ಣ ಅಂಟಿಕೊಂಡು ಅದೆಷ್ಟೋ ಸಮಯ ಕಳೆದಿದೆ. ಆದರೀಗ, ಮಾಧ್ಯಮ ರಂಗಕ್ಕೂ ಈ ಕಳಂಕ ಬಂದಿದೆ ಮತ್ತು ಅದನ್ನು ಎಗ್ಗಿಲ್ಲದೆ ತೋರ್ಪಡಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಈ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಎಂಬ ಕಾರ್ಪೊರೇಟ್ ಕುಳ ಬಯಲಿಗೆಳೆದ ಮಾಹಿತಿಯನ್ನೇ ನೋಡಿ, ಹಲವು 'ಮಹಾನ್' ಪತ್ರಕರ್ತರ ಬಣ್ಣ ಬಯಲಾಗಿದೆ. ಆ ನಂತರ, ನೋಟಿಗಾಗಿ ಓಟು ಅಥವಾ ಓಟಿಗಾಗಿ ನೋಟು ಎಂಬ, ಈ ದೇಶದ ಪ್ರಜಾತಂತ್ರ ವ್ಯವಸ್ಥೆಗೇ ಕಪ್ಪು ಚುಕ್ಕೆಯಾಗಿಬಿಟ್ಟ ಹಗರಣದಲ್ಲಿ ಮತ್ತೊಂದು ದೃಶ್ಯ ಮಾಧ್ಯಮದ ಹೆಸರಿಗೆ ಸೆಗಣಿ ಮೆತ್ತಿಕೊಂಡಿತ್ತು. ಇವುಗಳನ್ನೆಲ್ಲಾ ಒತ್ತಟ್ಟಿಗಿರಿಸಿ, ಕರ್ನಾಟಕದ ಮಾಧ್ಯಮರಂಗದಲ್ಲೂ ಇಂಥದೇ ಬೆಳವಣಿಗೆಯಾಗುತ್ತಿದೆಯೇ ಎಂಬ ಶಂಕೆಯೇ ಆತಂಕಕಾರಿ ಸಂಗತಿ.

ಈಗ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಮೀನನ್ನು ಡೀನೋಟಿಫೈ ಮಾಡಿಸಿ, ತಮ್ಮ ಪುತ್ರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಇದು ಎಂಬ ಕಾರಣಕ್ಕೆ ಅವರ ವಿರುದ್ಧ ಕೇಸು ದಾಖಲಾಗಿದೆ, ಅವರು ನ್ಯಾಯಾಂಗ ಬಂಧನಕ್ಕೆ ಹೋಗುವ ಮೂಲಕ ಅವರ ನಾಲ್ಕು ದಶಕಗಳ ಹೋರಾಟದ ಗರಿಮೆಗೆ ಮಸಿ ಬಳಿದಂತಾಗಿದೆ. ಈ ಬಗ್ಗೆ ನೆಲದ ಕಾನೂನು ತನ್ನದೇ ಕ್ರಮವನ್ನು ಕೈಗೊಳ್ಳುತ್ತಿದೆ. ಇದರಿಂದಾಗಿ ಯಡಿಯೂರಪ್ಪ ಅವರು ತಲೆಮರೆಸಿಕೊಳ್ಳದೆ (ಆದರೆ, ಮಾಧ್ಯಮಗಳ ಕಣ್ಣಿಗೆ ಸಿಲುಕದೆ), ನ್ಯಾಯಾಲಯಕ್ಕೆ ಶರಣಾಗಿದ್ದಾರೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದಾರೆ, ಮತ್ತೆ ಜೈಲು ಪಾಲಾಗಿದ್ದಾರೆ.

ಆದರೆ, ಕೇಸು ದಾಖಲಾಗಿ, ಜಾಮೀನು ನಿರಾಕರಣೆಯಾದಾಗ, ಯಡಿಯೂರಪ್ಪ ಅವರು ಕಾನೂನಿನ ಕೈಯಿಂದ ನುಣುಚಿಕೊಳ್ಳಲು ಓಡಿಹೋಗುತ್ತಾರೆ ಎಂದೆಲ್ಲಾ ಇದೇ ಮಾಧ್ಯಮಗಳು ಬಿಂಬಿಸಿದವು. ಕೊನೆಗೆ ಅವರು ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಗೆ ಸಿಲುಕದೆ ಇದ್ದಾಗ "ಇದು ತಪ್ಪು, ಮಾಧ್ಯಮಗಳಿಂದ ತಪ್ಪಿಸಿಕೊಂಡು ಅವರು ಮನೆಯಿಂದಲೇ ಅಜ್ಞಾತ ಸ್ಥಳಕ್ಕೆ ಪರಾರಿಯಾದರು" ಅಂತೆಲ್ಲಾ ಮೊದಲು ಬಿಂಬಿಸಲ್ಪಟ್ಟು, ನಂತರ, ನ್ಯಾಯಾಲಯದಲ್ಲಿ ಅವರು ಶರಣಾದಾಗಲೂ, ಬಿಎಸ್‌ವೈ ಅವರ ಕಾರ್ಟೂನುಗಳನ್ನು ಹಾಕಿ, ಅಳುತ್ತಿರುವಂತಹಾ ದೃಶ್ಯಗಳನ್ನು, ಕಂಬಿ ಎಣಿಸುವ ಕ್ಯಾರಿಕೇಚರ್‌ಗಳನ್ನು ಪ್ರದರ್ಶಿಸಿದವು. ವ್ಯಂಗ್ಯಚಿತ್ರಗಳೊಂದಿಗೆ ಆನಿಮೇಶನ್‌ಭರಿತ ಹಾಡುಗಳೆಲ್ಲವೂ ಜನರನ್ನು ರಂಜಿಸಿದವು. ಕೆಲವು ಪತ್ರಿಕೆಗಳಂತೂ ಧಾರಾವಾಹಿ ರೂಪದಲ್ಲಿ, ಯಡಿಯೂರಪ್ಪ ಅವರ ಒಂದೊಂದು ನಡೆಯನ್ನೂ ಇಂಚಿಂಚಾಗಿ ವಿಶ್ಲೇಷಿಸಿ, ನ್ಯೂಸ್ ಬದಲು ವ್ಯೂಸ್ (views) ಹೆಚ್ಚು ತುರುಕಿ, ಓದುಗರಿಗೆ ರಸದೌತಣವನ್ನೇ ನೀಡಿದವು. ಅಲ್ಲಿ ವಸ್ತುನಿಷ್ಠತೆಗೆ, ವಿಶ್ವಾಸಾರ್ಹತೆಗೆ ಬೆಲೆ ಇರಲಿಲ್ಲ.

ಆ ಬಳಿಕ, ಯಡಿಯೂರಪ್ಪ ಜಾಮೀನಿಗೆ ಅರ್ಜಿ ಸಲ್ಲಿಸಿ, ಇತರೆಲ್ಲ ಆರೋಪಿಗಳೂ ಮಾಡಿರುವಂತೆಯೇ, ಅನಾರೋಗ್ಯ ಕಾರಣಗಳನ್ನು ಮುಂದಿಡುತ್ತಿದ್ದಾರೆ, ಹೈ ಡ್ರಾಮಾ ಮಾಡುತ್ತಿದ್ದಾರೆ ಎಂಬುದು ಅತೀ ಹೆಚ್ಚು ವರ್ಣರಂಜಿತವಾಗಿ ಚರ್ಚೆಗೆ ಗ್ರಾಸವಾಯಿತು. ಅವರು ಜೈಲಿನಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಜೈಲಿಗೆ ರವಾನೆಯಾಗುವ ದೃಶ್ಯಾವಳಿಗಳು ರನ್ನಿಂಗ್ ಕಾಮೆಂಟರಿ ರೂಪದಲ್ಲಿ ಹರಿದುಬಂದವು. ನಾವು ಹೆಚ್ಚು ಕವರೇಜ್ ನೀಡುತ್ತಿದ್ದೇವೆ ಎಂಬ ಹೆಗ್ಗಳಿಕೆಗಾಗಿ, ಟಿಆರ್‌ಪಿ ಏರಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಚಾನೆಲ್‌ಗಳೂ ಹಗಲು ರಾತ್ರಿ ಕೆಲಸ ಮಾಡಿದವು. ಎಲ್ಲೆಲ್ಲೂ ಕ್ಯಾಮರಾಗಳೇ ಕಾಣಿಸುತ್ತಿದ್ದವೇ ಹೊರತು, ಯಡಿಯೂರಪ್ಪ ಕಾಣಿಸಲಿಲ್ಲ. ಅಂತೂ ಅವರು ಕೊನೆಗೆ, ಕ್ಯಾಮರಾ ಕಣ್ಣುಗಳಿಗೆ ಬೀಳದಂತಾಗಲೂ ಬೆಡ್‌ಶೀಟ್ ಕವರ್ ಮೂಲಕ ಆಂಬ್ಯುಲೆನ್ಸ್‌ಗೆ ಹೋಗಬೇಕಾದ ಪ್ರಸಂಗವೂ ಬಂತು. ಮಾಧ್ಯಮಗಳಲ್ಲೆಲ್ಲಾ ಅವಮಾನಕಾರಿ ಲೇಖನಗಳು ಬಂದವು. ಊಹಾಪೋಹದ ವರದಿಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆತು, ತೇಜೋವಧೆ, ಚಾರಿತ್ರ್ಯಹನನವೇ ಜಾಸ್ತಿಯಾಗತೊಡಗಿದಾಗ ರೋಸಿ ಹೋದ ಯಡಿಯೂರಪ್ಪ, "ಚಿಕಿತ್ಸೆಯೇ ಬೇಡ, ಜೈಲಿಗೇ ಹೋಗುತ್ತೇನೆ, ಅಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ" ಅಂದುಬಿಟ್ಟರು ಮತ್ತು ಜೈಲಿಗೆ ಮರಳಿದರು. ಇದನ್ನೂ ಕೂಡ, ಐಷಾರಾಮಿ ಜೈಲು ಯಾತ್ರೆ ಎಂದು ಕರೆಯಲಾಯಿತು.

ಹಾಗಂತ, ಇದು ಯಡಿಯೂರಪ್ಪರಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಟ ದರ್ಶನ್ ಬಂಧನ ವಿಷಯದಲ್ಲಾಗಲೀ, ಎಚ್.ಡಿ.ಕುಮಾರಸ್ವಾಮಿ ಪತ್ನಿಸಮೇತರಾಗಿ ನ್ಯಾಯಾಲಯಕ್ಕೆ ಬರುತ್ತಿರುವ ವಿಚಾರವಾಗಲೀ, ದೆಹಲಿಯಲ್ಲಿ ಎ.ರಾಜಾ, ಕನಿಮೋಳಿ ಮುಂತಾದವರು ಜೈಲುಪಾಲಾದ ವಿಚಾರಗಳಲ್ಲಾಗಲೀ, ಮಾಧ್ಯಮಗಳು ಮಾಡಿದ್ದು ಇದೇ ರೀತಿಯಲ್ಲವೇ?

[ಮುಂದಿನ ಪುಟಗಳಲ್ಲಿ: ಮಾಧ್ಯಮಗಳ ಈ ಪರಿ ವರ್ತನೆ ಮತ್ತು ಯಡಿಯೂರಪ್ಪ ವಿರುದ್ಧ ಪಕ್ಷದೊಳಗಿನ, ಹೊರಗಿನ ಸಂಚ]

ಇದರಲ್ಲಿ ಇನ್ನಷ್ಟು ಓದಿ :  
Widgets Magazine
Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...

Widgets Magazine
Widgets Magazine

 

Widgets Magazine
Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ...

Widgets Magazine