ಗಡಿಪಾರುಗೊಂಡಿರುವ ನಾಯಕರು ಚುನಾವಣಾ ಪೂರ್ವ ಪಾಕಿಸ್ತಾನ ಪ್ರವೇಶಿಸುವಂತಿಲ್ಲ ಎಂದು ಅಧ್ಯಕ್ಷ ಜನರಲ್ ಪರ್ವೆಜ್ ಮುಶರ್ರಫ್ ಆದೇಶವಿದ್ದರುವಂತೆಯೇ, ಮಾಜಿ ಪಾಕ್ ಪ್ರಧಾನಿ ನವಾಜ್ ಷರಿಫ್ ಅವರು ಜೂನ್ 30 ಕ್ಕಿಂತ ಮುಂಚೆ ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆಂದು ಪಾಕಿಸ್ತಾನ ಮುಸ್ಲಿಂ ಲೀಗ್(ನವಾಜ್) ಪಕ್ಷವು ಹೇಳಿದೆ.
ಜೂನ್ 30ಕ್ಕಿಂತ ಮುಂಚೆ ನವಾಜ್ ಷರೀಫ್ ಅವರು ಮಾತೃಭೂಮಿಗೆ ಮರಳಲಿದ್ದಾರೆಂದು ಪಿಎಂಎಲ್(ನವಾಜ್)ನ ನಾಯಕ ಶೇಖ್ ಅಫ್ತಾಬ್ ಅಹ್ಮದ್ ಅವರು ಸುದ್ದಿಗಾರರಿಗೆ ಹಸ್ಸಾನಬಾದ್‌ನಲ್ಲಿ ಶುಕ್ರವಾರ ಹೇಳಿದ್ದಾರೆ.
1971ರ ನಂತರ ದೇಶ ಅತಿ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ನವಾಜ್ ಷರೀಫ್ ಮಾತ್ರ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ದೇಶವನ್ನು ರಕ್ಷಿಸಿಸುವ ಸಾಮರ್ಥ್ಯ ಹೊಂದಿದ್ದಾರೆಂದು ಅಹ್ಮದ್ ಹೇಳಿದ್ದಾರೆ.
ವರ್ಷದ ಮುಕ್ತಾಯಕ್ಕೆ ಮುಂಚೆ ನಡೆಯುವ ಸಾರ್ವತ್ರಿಕ ಚುನಾವಣಾ ಪೂರ್ವ ಗಡಿಪಾರುಗೊಂಡಿರುವ ಮಾಜಿ ಪ್ರಧಾನಿಗಳಾದ ಬೆನಜಿರ್ ಭುಟ್ಟೊ ಮತ್ತು ನವಾಜ್ ಷರೀಫ್ ಅವರು ದೇಶವನ್ನು ಪ್ರವೇಶಿಸುವಂತಿಲ್ಲ ಎಂದು ಅಧ್ಯಕ್ಷ ಪರ್ವೇಜ್ ಮುಶರ್ರಫ್ ಈ ಮುಂಚೆ ಹೇಳಿಕೆ ನೀಡಿದ್ದರು.
|