ಭಾರತದ ರಾಷ್ಟ್ರಪಿತಾ ಮಹಾತ್ಮಗಾಂಧಿ ಹಾಗೂ ಬ್ರಿಟನ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಇತಿಹಾಸಕ್ಕೆ ಪಠ್ಯಪುಸ್ತಕಗಳಲ್ಲಿ ಸ್ಥಾನವಿಲ್ಲ ಎಂದು ಸರಕಾರದಿಂದ ನೇಮಕಗೊಂಡ ಶೈಕ್ಷಣಿಕ ಸಮಿತಿ ಪ್ರಕಟಿಸಿದೆ.
ಪಠ್ಯಪುಸ್ತಕಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ , ಅಡಾಲ್ಫ್ ಹಿಟ್ಲರ್ ಅವರುಗಳ ಇತಿಹಾಸ ಕೂಡಾ ತೆಗೆದುಹಾಕಲಾಗಿದೆ ಎಂದು ಶೈಕ್ಷಣಿಕ ಮೂಲಗಳು ತಿಳಿಸಿವೆ.
ಮುಂಬರುವ ವರ್ಷದಲ್ಲಿ ಹೊಸ ಪಠ್ಯ ಜಾರಿಗೆ ಬರಲಿದ್ದು 20 ನೇ ಶತಮಾನದಲ್ಲಿ ಚರ್ಚಿಲ್ ,ಗಾಂಧಿ, ಹಿಟ್ಲರ್ , ಜೋಸೆಫ್ ಸ್ಟಾಲಿನ್, ಬೆನಿಟೋ ಮಸಲೋನಿ ಅವರುಗಳ ಬಗ್ಗೆ ಅಧ್ಯಯನ ಅಗತ್ಯವಿಲ್ಲ ಎಂದು ಹೇಳಿದೆ.
11 ರಿಂದ 14 ವರ್ಷ ವಯಸ್ಸಿನ ಮಕ್ಕಳು ಪ್ರಥಮ ಮಹಾಯುದ್ದ ಮತ್ತು ಎರಡನೇ ಮಹಾಯುದ್ದ, ಬ್ರಿಟಿಷ್ ಚಕ್ರಾಧಿಪತ್ಯ ಹಾಗೂ ಗುಲಾಮಗಿರಿ ವ್ಯಾಪಾರ ಕುರಿತು ಈಗಾಗಲೇ ಅಧ್ಯಯನ ಮಾಡಿದ್ದಾರೆ ಇನ್ನು ಮುಂದೆ ಇದರ ಅಗತ್ಯವಿಲ್ಲವೆಂದು ವಿವರಿಸಿದೆ.
ಹೊಸ ಪಠ್ಯ ನೀತಿಯಲ್ಲಿ ಲೇಖಕರಾದ ಡಗ್ಲಾಸ್ ಆಡಮ್ಸ್ , ಅಲನ್ ಬೆನ್ನೆಟ್,ಟಿ ಎಸ್. ಇಲಿಯಟ್, ಜಾರ್ಜ್ ಓರವೆಲ್, ಜಾನೆ ಅಸ್ಟಿನ್, ಚಾರ್ಲಸ್ ಡಿಕನಸನ್ ಅವರುಗಳನ್ನು ಸೇರ್ಪಡೆಗೊಳಿಸಲಾಗಿದೆ.
|