ಡೆಮಾಕ್ರಿಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಬಾರಕ್ ಒಬಾಮ ಉತ್ತರ ಕ್ಯಾಲಿಫೋರ್ನಿಯಾ ಪ್ರಾಥಮಿಕ ಚುನಾವಣೆಯಲ್ಲಿ ಬಾರೀ ಗೆಲವು ಸಾಧಿಸಿದ್ದು, ಸ್ಪರ್ಧಾ ಓಟದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಏತನ್ಮಧ್ಯೆ, ಹಿಲರಿ ಕ್ಲಿಂಟನ್ ಅವರು ಇಂಡಿಯಾನದಲ್ಲಿ ಗೆಲುವು ಸಾಧಿಸಿದ್ದು, ತನ್ನ ವಿರೋಧಿ ಅಭ್ಯರ್ಥಿಯ ಓಟಕ್ಕೆ ತಡೆಹಾಕಲು ಪ್ರಯತ್ನಿಸುತ್ತಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಸ್ಥಾನದ ಸ್ಫರ್ಧೆಗೆ ನಾಮನಿರ್ದೇಶನದ ಗೆಲುವಿಗೆ 200 ಡೆಲಿಗೇಟ್‌ಗಳಷ್ಟು ಮಾತ್ರ ಕೊರತೆ ಇದೆ ಎಂದು ಅವರು ಮಂಗಳವಾರ ರಾತ್ರಿ ತಮ್ಮ ಗೆಲುವಿನ ಬಳಿಕ ಮಾತನಾಡುತ್ತಾ ನುಡಿದರು.
ಒಬಾಮ ಕನಿಷ್ಠ 40 ಡೆಲಿಗೇಟ್ ಮತಗಳನ್ನು ಗೆದ್ದಿದ್ದಾರೆ. ಕ್ಲಿಂಟನ್ 31 ಡೆಲಿಗೇಟ್ ಮತಗಳನ್ನು ಗೆದ್ದಿದ್ದಾರೆ. ಇದರಲ್ಲಿ 116 ಮತಗಳು ಇನ್ನಷ್ಟೆ ತೀರ್ಮಾನವಾಗಬೇಕಿದೆ.
|