ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಸಾಮ ವಜೀರಿಸ್ತಾನದಲ್ಲಿ: ಅಮೆರಿಕ ಪತ್ರಕರ್ತ
ND
ವಜೀರಿಸ್ತಾನದ ಮಿರಾಮ್ ಶಾ ನಗರದಲ್ಲೆಲ್ಲೊ ಕುಖ್ಯಾತ ಉಗ್ರಗಾಮಿ ಸಂಘಟನೆ ಅಲ್‌-ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಅಡಗಿದ್ದಾನೆ ಎಂದು ಅಮೆರಿಕಾದ ಪತ್ರಕರ್ತರೊಬ್ಬರು ಹೇಳಿದ್ದಾರೆ.

ಒಸಮಾ ಸ್ಥಳೀಯ ಬುಡಕಟ್ಟು ಜನರ ಮೇಲೆ ಎಂಥಹ ಪ್ರಭಾವ ಬೀರಿದ್ದಾನೆಂದರೆ, ಪಾಕಿಸ್ತಾನ ಪೊಲೀಸರು ಈ ಪ್ರದೇಶಕ್ಕೆ ಕಾಲಿಡಲೂ ಬೆಚ್ಚಿಬೀಳುತ್ತಾರೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಬಿನ್ ಲಾಡೆನ್ ಕುಟುಂಬದ ಬಗ್ಗೆ ಪುಸ್ತಕವೊಂದನ್ನು ಬರೆದಿರುವ ಪತ್ರಕರ್ತ ಸ್ಟೀವ್ ಕೋಲ್, ಲಾಡೆನ್ ಪಾಕಿಸ್ತನಾದಲ್ಲಿ ಇರುವುದು ನಿಶ್ಚಿತ ಎಂದು ಹೇಳಿದ್ದಾರೆ.

ಉತ್ತರ ವಜೀರಿಸ್ತಾನದ ಮಿರಾಮ್ ಶಾ ನಗರದ ಗುಡ್ಡಗಾಡು ಪ್ರದೇಶದಲ್ಲಿ ಒಸಾಮ ಅಡಗಿದ್ದಾನೆಂದೂ ತಾನು ಹೇಳಬಲ್ಲೆ ಎಂದಿರುವ ಸ್ಟೀವ್, ಪಾಕಿಸ್ತಾನದ ಸೇನೆಯು ಈ ಪ್ರದೇಶಕ್ಕೆ ಪ್ರವೇಶಿಸುವ ಧೈರ್ಯಹೊಂದಿಲ್ಲ ಎಂದು ಜರ್ಮನ್ ಸುದ್ದಿ ನಿಯತಕಾಲಿಕ ಡೇರ್ ಸ್ಪೈಗೆಲ್‌ಗೆ ಹೇಳಿರುವುದಾಗಿ ಡೇಲಿ ಟೈಮ್ಸ್ ಉಲ್ಲೇಖಿಸಿದೆ.

ಒಸಮಾ ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರ ಮಾಡುತ್ತಿರಬಹುದು, ಮತ್ತು ಆತನ ಸ್ನೇಹಿತರು ಆತನನ್ನು ರಕ್ಷಿಸುತ್ತಿರಬಹದು. ಆದರೆ ಯಾರಾದರೊಬ್ಬರು ಆತನಿಗೆ ದ್ರೋಹವೆಸಗದೆ ಇರಲಾರರು ಎಂದು ಸ್ಟೀವ್ ಹೇಳಿದ್ದಾರೆ.

ಕಳೆದ ವರ್ಷ ಅಮೆರಿಕಾದ ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ಒಸಮಾ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂಬ ಶಂಕೆವ್ಯ ಕ್ತಪಡಿಸಿದ್ದರು. ಒಸಮಾ ಬುಡಕಟ್ಟು ಪ್ರದೇಶದಲ್ಲಿ ಅಡಗಿದ್ದಾನೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದೂ ಅವರು ಹೇಳಿದ್ದರು.
ಮತ್ತಷ್ಟು
ಉತ್ತರ ಕೆರೋಲಿನಾದಲ್ಲಿ ಒಬಾಮ ಗೆಲುವು
ಗ್ಯಾಸ್ ಬೆಲೆ ಏರಿದರೆ ನೌಕರರ ಕಾರ್ಯಸಾಮರ್ಥ್ಯ ಕುಸಿತ!
ಇದು ಚೆಂಡಲ್ಲ, ಬೃಹತ್ ಗಾತ್ರದ ಮೊಟ್ಟೆ!
ವಿಶ್ವದ ಅಗ್ರ 100 ಮೇಧಾವಿಗಳಲ್ಲಿ 7 ಭಾರತೀಯರು
ಕಂಗೆಟ್ಟ ಮ್ಯಾನ್ಮಾರ್: 14,000 ಅಧಿಕ ಬಲಿ
ದಕ್ಷಿಣ ಆಫ್ರಿಕಾದಲ್ಲಿ ಅಯ್ಯಪ್ಪ ಮಂದಿರ