ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನದಿಂದಲೂ ಕ್ಷಿಪಣಿ ಪರೀಕ್ಷೆ
ಭಾರತವು ಅಗ್ನಿ-3 ಕ್ಷಿಪಣಿಯ ಪರೀಕ್ಷಾ ಉಡವಣೆ ನಡೆಸಿರುವ ಮರುದಿನವೇ ಪಾಕಿಸ್ತಾನ ಕೂಡ ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಹತ್ಫ್-8 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದೆ. ಈ ಕ್ಷಿಪಣಿಯು ಭೂಮಿ ಮತ್ತು ಸಮುದ್ರದ ಗುರಿಗೆ ನಿಖರವಾಗಿ ಬಡಿಯಬಲ್ಲ ಸಾಮರ್ಥ್ಯ ಹೊಂದಿದೆ.

ವೈಮಾನಿಕ ವೇದಿಕೆಗಳಿಂದ ಉಡಾವಣೆಗೆ ವಿಶೇಷವಾಗಿ ನಿರ್ಮಿಸಿದ ರಾಡ್ ನೆಲ ಮತ್ತು ಸಮುದ್ರದಲ್ಲಿ ಮಹತ್ವದ ವ್ಯೂಹಾತ್ಮಕ ಸಾಮರ್ಥ್ಯ ಸಾಧನೆಗೆ ಪಾಕಿಸ್ತಾನಕ್ಕೆ ನೆರವಾಗಿದೆ ಪಾಕ್ ಸೇನಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅರೇಬಿಕ್‌ನಲ್ಲಿ ಗುಡುಗೆಂದು ಕರೆಯುವ ರಾಡ್ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಿಕೆ ತಿಳಿಸಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿ ವಿಶೇಷ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.

ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಪ್ರಧಾನಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರುಗಳು ಯಶಸ್ವೀ ಕ್ಷಿಪಣಿ ಹಾರಾಟಕ್ಕಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮತ್ತಷ್ಟು
ಖಲಿದಾ ಪುತ್ರನ ವಿರುದ್ಧ ಆರೋಪಪಟ್ಟಿ
ಮ್ಯಾನ್ಮಾರ್‌ನಲ್ಲೀಗ ರೋಗರುಜಿನಗಳ ಭಯ
ರಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೆಡ್ವೆಡೇವ್
ಒಸಾಮ ವಜೀರಿಸ್ತಾನದಲ್ಲಿ: ಅಮೆರಿಕ ಪತ್ರಕರ್ತ
ಉತ್ತರ ಕೆರೋಲಿನಾದಲ್ಲಿ ಒಬಾಮ ಗೆಲುವು
ಗ್ಯಾಸ್ ಬೆಲೆ ಏರಿದರೆ ನೌಕರರ ಕಾರ್ಯಸಾಮರ್ಥ್ಯ ಕುಸಿತ!