ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್‌: ಭಾರತೀಯ ವಿದ್ಯಾರ್ಥಿನಿ ಹತ್ಯೆ
ಬ್ರಿಟನ್‌‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿನಿಯೋರ್ವಳು ಹತ್ಯೆಯಾಗಿರುವುದಾಗಿ ವರದಿಯಾಗಿದೆ. 23 ವರ್ಷ ಪ್ರಾಯದ ಜ್ಯೋತಿರ್ಮಾಯಿ ಎಂಬ ಈ ವಿದ್ಯಾರ್ಥಿನಿ ಆಂಧ್ರಪ್ರದೇಶದ ವಿಜಯವಾಡಕ್ಕೆ ಸೇರಿದವರಾಗಿದ್ದು, ಮಂಗಳವಾರ ರಾತ್ರಿ ಹತ್ಯೆಗೀಡಾಗಿರುವುದಾಗಿ ಹೇಳಲಾಗಿದೆ.

ಬರ್ಮಿಂಗ್‌ಹ್ಯಾಂ ವೂಲ್ವರ್‌ಹಾಮ್ಟನ್ ವಿಶ್ವವಿದ್ಯಾಲಯದಲ್ಲಿ ಜ್ಯೋತಿರ್ಮಾಯಿ ವೈದ್ಯಕೀಯ ಪದವಿ ಕಲಿಯುತ್ತಿದ್ದರೆಂದು ವರದಿಯಾಗಿದೆ. ಜ್ಯೋತಿರ್ಮಾಯಿ ಅವರನ್ನು ಅವರು ಉಳಿದುಕೊಂಡಿದ್ದ ಹಾಸ್ಟೆಲ್‌ನಲ್ಲಿ ಕೊಲೆ ಮಾಡಲಾಗಿದೆ. ಈ ಕೃತ್ಯ ಎಸಗಿದವರು ಯಾರೆಂಬ ಬಗ್ಗೆ ಸ್ನೇಹಿತೆಯರಿಗೆ ಅರಿವಿಲ್ಲ. ತಮ್ಮ ಪುತ್ರಿಯ ಸಾವಿನ ಸುದ್ದಿ ಕೇಳಿದ ಅವರ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿದ್ಯಾರ್ಥಿನಿಯು ತಲೆಗೆ ಏಟು ಬಿದ್ದು ಮೃತಳಾಗಿದ್ದಾಳೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.

ಜ್ಯೋತಿರ್ಮಾಯಿ ದೇಹವನ್ನು ಭಾರತಕ್ಕೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜ್ಯೋತಿರ್ಮಾಯಿ ಚಿಕ್ಕಮ್ಮ ಎಂ. ಲಕ್ಷ್ಮಿ ಹೇಳಿದ್ದಾರೆ.ಯಾಕಾಗಿ ಕೊಲೆ ಮಾಡಲಾಗಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಮತ್ತಷ್ಟು
ಪಾಕಿಸ್ತಾನದಿಂದಲೂ ಕ್ಷಿಪಣಿ ಪರೀಕ್ಷೆ
ಖಲಿದಾ ಪುತ್ರನ ವಿರುದ್ಧ ಆರೋಪಪಟ್ಟಿ
ಮ್ಯಾನ್ಮಾರ್‌ನಲ್ಲೀಗ ರೋಗರುಜಿನಗಳ ಭಯ
ರಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೆಡ್ವೆಡೇವ್
ಒಸಾಮ ವಜೀರಿಸ್ತಾನದಲ್ಲಿ: ಅಮೆರಿಕ ಪತ್ರಕರ್ತ
ಉತ್ತರ ಕೆರೋಲಿನಾದಲ್ಲಿ ಒಬಾಮ ಗೆಲುವು