ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತೃಧರ್ಮಕ್ಕೆ ಮರಳಲು ನ್ಯಾಯಾಲಯದ ಅನುಮತಿ
ಮೈಲಿಗಲ್ಲಿನ ತೀರ್ಪೊಂದನ್ನು ನೀಡಿರುವ ಮಲೇಷ್ಯಾದ ಶರಿಯ ನ್ಯಾಯಾಲಯವು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಮಹಿಳೆಯೊಬ್ಬಾಕೆಗೆ, ಆಕೆಯ ಮಾತೃಧರ್ಮವಾಗಿರುವ ಬೌದ್ಧ ಧರ್ಮಕ್ಕೆ ಮರಳಲು ಅನಮತಿ ನೀಡಿದೆ.

ಮುಸ್ಲಿಂ ಜನಾಂಗದ ವೈಯಕ್ತಿಕ ಮತ್ತು ಧಾರ್ಮಿಕ ನೀತಿನಿಯಮಗಳ ಉಸ್ತುವಾರಿಯ ಪೆನಾಂಗ್ ಶರಿಯ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ. ಸಿತಿ ಪಾತಿಮ ತಾನ್ ಅಬ್ದುಲ್ಲ ಎಂಬ ಮಹಿಳೆಯು, ಇರಾನ್ ವ್ಯಕ್ತಿಯೊಂದಿಗಿನ ತನ್ನ ವಿವಾಹವು ಮುರಿದುಬಿದ್ದ ಬಳಿಕ ಮುಸ್ಲಿಮೇತರಳೆಂದು ಘೋಷಿಸಲು ನ್ಯಾಯಾಲಯದ ಮೊರೆ ಹೋಗಿದ್ದಳು.

ಚೀನ ಮೂಲದವಳಾದ ತಾನ್ ಯಾಮ್ ಯುವಾಂಗ್ ಎಂಬ ಹೆಸರಿನವಳಾಗಲಿರುವ ಸಿತಿ, ಈ ಅರ್ಜಿಯನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಸಲ್ಲಿಸಿದ್ದಳು.

ಇರಾನಿನ ಫೆರುದೌನ್ ಅಶಾನಿಯನ್ ಎಂಬ ವ್ಯಕ್ತಿಯನ್ನು ವಿವಾಹವಾಗ ಬಯಸಿದ್ದ ಸಿತಿಯು 1998ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದಳಾದರೂ, ತಾನು ಆ ಧರ್ಮದ ರೀತಿ ರಿವಾಜುಗಳನ್ನು ಎಂದಿಗೂ ಅನುಸರಿಸಲಿಲ್ಲ ಎಂದು ಹೇಳಿದ್ದಾಳೆ.

ಸಿತಿಯ ಪತಿ ಹಾಗೂ ಇಸ್ಲಾಮ್ ಪ್ರಾಧಿಕಾರಗಳು ಆಕೆಗೆ ಸೂಕ್ತ ಧಾರ್ಮಿಕ ಸಲಹೆಗಳನ್ನು ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಆಕೆಯ ಮೇಲೆ ಗೂಬೆ ಕೂರಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿರುವ ವೇಳೆಗೆ ಹೇಳಿದೆ.
ಮತ್ತಷ್ಟು
ಬ್ರಿಟನ್‌: ಭಾರತೀಯ ವಿದ್ಯಾರ್ಥಿನಿ ಹತ್ಯೆ
ಪಾಕಿಸ್ತಾನದಿಂದಲೂ ಕ್ಷಿಪಣಿ ಪರೀಕ್ಷೆ
ಖಲಿದಾ ಪುತ್ರನ ವಿರುದ್ಧ ಆರೋಪಪಟ್ಟಿ
ಮ್ಯಾನ್ಮಾರ್‌ನಲ್ಲೀಗ ರೋಗರುಜಿನಗಳ ಭಯ
ರಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೆಡ್ವೆಡೇವ್
ಒಸಾಮ ವಜೀರಿಸ್ತಾನದಲ್ಲಿ: ಅಮೆರಿಕ ಪತ್ರಕರ್ತ