ನೇಪಾಳದಲ್ಲಿ ರಾಜಪ್ರಭುತ್ವಕ್ಕೆ ಅಂತ್ಯ ಹಾಡಲು ಕಂಕಣ ತೊಟ್ಟಿರುವ ಮಾವೋವಾದಿ ನಾಯಕ ಪ್ರಚಂಡ, ಮಾಜಿ ದೊರೆ ಜ್ಞಾನೇಂದ್ರ ಅವರನ್ನು ಗೌರವಯುತವಾಗಿ ಗದ್ದುಗೆಯಿಂದ ಕೆಳಗಿಳಿಸುವ ಕುರಿತಾಗಿ ಮಾತುಕತೆ ನಡೆಸಲು, ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
ರಾಜಪದವಿಯನ್ನು ತ್ಯಜಿಸಿ, ಅರಮನೆ ತೊರೆಯಬೇಕೆಂಬ ತನ್ನ ಸೂಚನೆಯನ್ನು ದೊರೆ ಜ್ಞಾನೇಂದ್ರ ಸ್ವೀಕರಿಸಿರುವುದಾಗಿ ತಿಳಿಸಿದ ಪ್ರಚಂಡ, ರಾಜಮನೆತನದ ಮುಂದಿನ ಸ್ಥಿತಿಗತಿ ಕುರಿತು ಚರ್ಚಿಸುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಜ್ಞಾನೇಂದ್ರ ಅವರು ಜನರ ತೀರ್ಪಿಗೆ ತಲೆಬಾಗದಿದ್ದರೆ ಅವರು ಸಮಸ್ಯೆ ಎದುರಿಸಬೇಕಿರುವುದರಿಂದ, ಅವರು ಈ ಬಗ್ಗೆ ಮೂರ್ಖತನದ ನಿರ್ಧಾರ ತಳೆಯುವುದಿಲ್ಲ ಎಂಬ ನಂಬಿಕೆ ಇರುವುದಾಗಿ ತನಗಿರುವುದಾಗಿ ಪ್ರಚಂಡ ಹೇಳಿದ್ದಾರೆ.
ನೇಪಾಳದಲ್ಲಿ ಇತ್ತೀಚೆಗೆ ನಡೆದ ಮಹಾ ಚುನಾವಣೆಯಲ್ಲಿ ಮಾವೋವಾದಿಗಳು ಪ್ರಚಂಡ ಬಹುಮತ ಗಳಿಸಿದ್ದು, ಮಾವೊವಾದಿಗಳ ನೇತೃತ್ವದ ನೂತನ ಸರಕಾರ ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ.
|