ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ-ಗಿಲಾನಿ
ಪಾಕಿಸ್ತಾನದಿಂದ ಭಾರತದ ವಿರುದ್ದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಿಡುವದಿಲ್ಲ. ಭೂಗತ ದೊರೆ ದಾವೂದ್ ಇಬ್ರಾಹಿಂ ವಿರುದ್ದದ ಸಾಕ್ಷಧಾರಗಳನ್ನು ಭಾರತ, ಪಾಕಿಸ್ತಾನಕ್ಕೆ ಸಲ್ಲಿಸಿದಲ್ಲಿ ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ ಎಂದು ಪಾಕ್ ಪ್ರಧಾನಿ ಗಿಲಾನಿ ಹೇಳಿದ್ದಾರೆ.

1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಕಂದಹಾರ ವಿಮಾನ ಅಪಹರಣ ಪ್ರಕರಣದ ಭಯೋತ್ಪಾದಕ ನಾಯಕ ಮಸೂದ್ ಅಜರ್ ವಿರುದ್ದ ಸಾಕ್ಷಾಧಾರಗಳನ್ನು ನೀಡಿದಲ್ಲಿ ಅವರನ್ನು ಭಾರತಕ್ಕೆ ಒಪ್ಪಿಸಲು ಕ್ರಮತೆಗೆದುಕೊಳ್ಳಲಾಗುವುದು ಎಂದು ಗಿಲಾನಿ ಹೇಳಿದ್ದಾರೆ.

ಪಾಕಿಸ್ತಾನದ ಐಎಸ್‌ಐ ಹಾಗೂ ಲಷ್ಕರ್-ಏ-ತೊಯಿಬಾ ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸಿನ ಸಹಾಯ ನೀಡುವುದಲ್ಲದೇ ಅವುಗಳನ್ನು ಪಾಕ್ ಬೆಂಬಲಿಸುತ್ತಿದೆ ಎನ್ನುವುದನ್ನು ತಳ್ಳಿ ಹಾಕಿದ ಗಿಲಾನಿ ನಾವು ಭಯೋತ್ಪಾದಕತೆಯ ವಿರುದ್ದ ಹೋರಾಟ ನಡೆಸಿದ್ದೇವೆ ಎನ್ನುವುದನ್ನು ಜಾಗತಿಕ ಸಮುದಾಯ ಅರಿಯಲಿ ಎಂದು ಹೇಳಿದ್ದಾರೆ.

ಭಯೋತ್ಪಾದನೆಯಿಂದಾಗಿ ನಾವು ನಮ್ಮ ನಾಯಕಿ ಬೆನ್‌ಜಿರ್ ಭುಟ್ಟೋ ಅವರನ್ನು ಕಳೆದುಕೊಂಡಿದ್ದೆವೆ ಎನ್ನುವುದು ಜಗತ್ತಿಗೆ ತಿಳಿದ ಸಂಗತಿಯಾಗಿದೆ ಎಂದು ಗಿಲಾನಿ ಹೇಳಿದ್ದಾರೆ.

ಲಷ್ಕರ್-ತೊಯಿಬಾ, ಜೈಷ್ ಏ ಮೊಹಮ್ಮದ್, ಅಲ್-ಬದ್ರ್ ಉಗ್ರಗಾಮಿ ಸಂಘಟನೆಗಳು ತಮ್ಮ ಮೊದಲಿನ ಹೆಸರುಗಳನ್ನು ಬದಲಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು ಅಂತಹ ಉಗ್ರಗಾಮಿ ಸಂಘಟನೆಗಳ ವಿರುದ್ದ ಸೂಕ್ತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಮತ್ತಷ್ಟು
ಸರಬ್‌ಜಿತ್ ಕ್ಷಮಾದಾನ: ಗಿಲಾನಿ ಸುಳಿವು
ಭಾರತೀಯ ಸಂಜಾತೆ ಪ್ರಥಮ ಮಹಿಳಾ ಮೇಯರ್
ಜನರಲ್‌ಗಳ ಹೆಸರಿನಲ್ಲಿ ಪರಿಹಾರ ವಿತರಿಸುತ್ತಿರುವ ಜುಂತಾ
ಮಾವೋವಾದಿಗಳ ವಿರುದ್ಧ ಕ್ರಮಕ್ಕೆ ಎನ್‌ಸಿ ಆಗ್ರಹ
ಬುಶ್ ಹೇಳಿಕೆ ಉತ್ತಮ ಅಭಿರುಚಿಯದ್ದು: ಸಿಯಾನ್
ಶರೀಫ್-ಜರ್ದಾರಿ ಮಾತುಕತೆ ಅಸಂಪೂರ್ಣ