ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ರಾಜಧಾನಿ ಖಾರ್ಟೌಮ್ ಮೇಲೆ ದಾರ್ಪುರ್ ಬಂಡುಕೋರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸುಡಾನ್ ಸರಕಾರ ಚಡ್‌ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ.

ಶನಿವಾರದಂದು, ಅಧಿಕಾರ ಪಡೆಯುವಾಗಿನ ಪ್ರಯತ್ನದಲ್ಲಿ ಖಾರ್ಟೌಮ್ ಉಪನಗರದಲ್ಲಿ ಬಂಡುಕೋರರು ಸುಡಾನ್ ಸೈನಿಕರ ಮೇಲೆ ದಾಳಿ ನಡೆಸಿದರು. ಅಧಿಕಾರಿಗಳು ಹೇಳುವಂತೆ ಈ ದಾಳಿಯನ್ನು ವಿಫಲಗೊಳಿಸಲಾಗಿದೆ.

ತಾವು ಚಡ್ ದೇಶದೊಂದಿಗಿನ ತಮ್ಮ ರಾಜಕೀಯ ಸಂಬಂಧವನ್ನು ಕಡಿದು ಹಾಕುತ್ತಿದ್ದೇವೆ ಎಂದು ಸುಡಾನ್ ಅಧ್ಯಕ್ಷ ಒಮರ್ ಹಸ್ಸನ್ ಅಲ್-ಬಶೀರ್ ಸರಕಾರಿ ಟಿವಿಯಲ್ಲಿ ತಿಳಿಸಿದ್ದಾರೆ.

ಬಂಡುಕೋರರ ಈ ದಾಳಿಗೆ ಚಡ್ ಪಡೆಗಳು ಬೆಂಬಲ ನೀಡುತ್ತಿದ್ದು, ಅವರುಗಳು ಕಲೀಲ್ ಇಬ್ರಾಹಿಂ ನಾಯಕತ್ವದಡಿ ಚಡ್‌ನಿಂದ ಸಂಚರಿಸಿದ್ದಾರೆ ಎಂದು ಬಶೀರ್ ಆರೋಪಿಸಿದರು. ಇಬ್ರಾಹಿಂ ಸುಡಾನಿನ ಪಶ್ಚಿಮಾತ್ಯ ದಾರ್ಪುರ್ ವಲಯದ ಬಂಡಾಯ ನ್ಯಾಯ ಮತ್ತು ಸಮಾನತೆ ಚಳುವಳಿಯ ನಾಯಕನಾಗಿದ್ದಾನೆ.

ದಾಳಿ ವೇಳೆ, ಭಾರಿ ಗುಂಡಿನ ಚಕಮಕಿ ಮತ್ತು ಫಿರಂಗಿ ದಾಳಿಗಳು ಒಮ್ಡುರ್ಮಾನ್ ಪ್ರದೇಶವನ್ನು ತಲ್ಲಣಗೊಳಿಸಿತು. ಕದನಕ್ಕಾಗಿ ಹೆಲಿಕಾಪ್ಟರ್ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಕಳುಹಿಸಲಾಗಿದ್ದು, ರಾತ್ರೋರಾತ್ರಿ ಕರ್ಫ್ಯೂವನ್ನು ಘೋಷಿಸಲಾಗಿದೆ.
ಮತ್ತಷ್ಟು
ಸರಬ್ಜಿತ್‌ಗೆ ಕ್ಷಮೆ : ಗಿಲಾನಿ ಸುಳಿವು
ಮ್ಮಾನ್ಮಾರ್: ಭಾರೀ ಪ್ರಮಾಣದ ಹಿಂಸಾಚಾರ
ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ-ಗಿಲಾನಿ
ಸರಬ್‌ಜಿತ್ ಕ್ಷಮಾದಾನ: ಗಿಲಾನಿ ಸುಳಿವು
ಭಾರತೀಯ ಸಂಜಾತೆ ಪ್ರಥಮ ಮಹಿಳಾ ಮೇಯರ್
ಜನರಲ್‌ಗಳ ಹೆಸರಿನಲ್ಲಿ ಪರಿಹಾರ ವಿತರಿಸುತ್ತಿರುವ ಜುಂತಾ